T20 ಏಷ್ಯಾಕಪ್‌ ಟೂರ್ನಿಗೆ ಭಾರತ ಮಹಿಳಾ ತಂಡ ಪ್ರಕಟ – ಕನ್ನಡತಿ ಶ್ರೇಯಾಂಕಾಗೆ ಸ್ಥಾನ!

Public TV
2 Min Read
Shreyanka Patil

ಮುಂಬೈ: ಇದೇ ಜುಲೈ 19ರಿಂದ ಜು.28ರ ವರೆಗೆ ನಡೆಯಲಿರುವ 2024ರ ಮಹಿಳೆಯರ T20 ಏಷ್ಯಾಕಪ್‌ (Womens Asia Cup T20) ಟೂರ್ನಿಗೆ ಬಿಸಿಸಿಐ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್‌ ಕೌರ್‌  (Harmanpreet Kaur) ಅವರಿಗೆ ನಾಯಕತ್ವ ನೀಡಲಾಗಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ind w vs sa w india seal series 3 0 against south africa smriti mandhana breaks record for most runs by indian woman in bilateral odi series 1

ಕನ್ನಡತಿ ಶ್ರೇಯಾಂಕಾಗೂ ಸ್ಥಾನ:
ಮಹತ್ವದ ಟೂರ್ನಿಯಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಸಹ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ತ್ರಿಪಕ್ಷೀಯ ಸರಣಿಗೆ ಶ್ರೇಯಾಂಕಾ ಪಾಟೀಲ್‌ ಆಯ್ಕೆಯಾಗಿದ್ದರೂ ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿದಿಲ್ಲ. ಆದಾಗ್ಯೂ ಕನ್ನಡತಿ ಏಷ್ಯಾಕಪ್‌ ಟೂರ್ನಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಗಮನಾರ್ಹ.

ಇದೇ ವರ್ಷ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ (WPL) 2ನೇ ಆವೃತ್ತಿಯಲ್ಲಿ ಶ್ರೇಯಾಂಕಾ ಪಾಟೀಲ್‌ ಹಾಲಿ ಚಾಂಪಿಯನ್ಸ್‌ ಆರ್‌ಸಿಬಿ ಮಹಿಳಾ ತಂಡದ ಪರ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡಿದ್ದರು.

Harmanpreet Kaur Smriti Mandhana 3

ಏಷ್ಯಾಕಪ್‌ಗೆ ಮಹಿಳಾ ತಂಡ ಹೀಗಿದೆ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗ್ಸ್‌, ರಿಚಾ ಘೋಷ್ (ವಿಕೆಟ್‌ ಕೀಪರ್‌), ಉಮಾ ಚೆಟ್ರಿ (ವಿಕೆಟ್‌ ಕೀಪರ್‌), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್. ಮೀಸಲು ಆಟಗಾರ್ತಿಯರು: ಶ್ವೇತಾ ಸೆಹ್ರಾವತ್, ಸೈಕಾ ಇಶಾಕ್, ತನುಜಾ ಕನ್ವರ್, ಮೇಘನಾ ಸಿಂಗ್.

Shreyanka Patil

ಯಾವಾಗಾ ಟೂರ್ನಿ?
2024ರ ಮಹಿಳಾ ಟಿ20 ಏಷ್ಯಾಕಪ್‌ ಟೂರ್ನಿಯೂ ಇದೇ ಜುಲೈ 19ರಿಂದ ಆರಂಭವಾಗಲಿದೆ. ಶ್ರೀಲಂಕಾ ಆತಿಥ್ಯದಲ್ಲಿ ಟೂರ್ನಿ ನಡೆಯುತ್ತಿದ್ದು, ಭಾರತೀಯ ಕಾಲಮಾನ ರಾತ್ರಿ 7 ಹಾಗೂ ಮಧ್ಯಾಹ್ನ 2 ಗಂಟೆಗೆ ಪಂದ್ಯಗಳು ಶುರುವಾಗಲಿದೆ. ʻಎʼ ಗುಂಪಿನಲ್ಲಿರುವ ಭಾರತ ತಂಡವು ಜುಲೈ 19ರಂದು ಪಾಕಿಸ್ತಾನ ವಿರುದ್ಧ ಆರಂಭಿಕ ಪಂದ್ಯವನ್ನಾಡಲಿದೆ. ಜುಲೈ 26ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಜುಲೈ 28ರಂದು ಫೈನಲ್‌ ಪಂದ್ಯ ನಡೆಯಲಿದೆ.

ಭಾರತದ ಪಂದ್ಯಗಳು:
ಜು.19 – ಪಾಕಿಸ್ತಾನ ವಿರುದ್ಧ
ಜು.21 – ಯುಎಇ ವಿರುದ್ಧ
ಜು.23 – ನೇಪಾಳ ವಿರುದ್ಧ

Share This Article