ನವದೆಹಲಿ: ಶಿವಸೇನೆ ಪಕ್ಷದಲ್ಲಿ ಸಿಂಬಲ್ ಫೈಟ್ ಆರಂಭವಾಗಿದ್ದು, ಈ ಸಂಬಂಧ ಕೇಂದ್ರ ಚುನಾವಣೆ ಆಯೋಗವು ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಬಣಕ್ಕೆ ನೋಟಿಸ್ ನೀಡಿದೆ.
ಶಿವಸೇನೆಯ ನಿಯಂತ್ರಣಕ್ಕಾಗಿ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನಡುವಿನ ಕದನವು ಹೊಸ ಹಂತವನ್ನು ಪಡೆದುಕೊಳ್ಳುತ್ತಿದೆ. ಶಿವಸೇನೆ ಪಕ್ಷವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಸಾಬೀತುಪಡಿಸಲು ಇಬ್ಬರೂ ಸಾಕ್ಷಿ ನೀಡಬೇಕು. ಈ ಎಲ್ಲಾ ದಾಖಲೆಗಳನ್ನು ಆ. 8ರೊಳಗೆ ನೀಡುವಂತೆ ಚುನಾವಣಾ ಆಯೋಗವು ಎರಡೂ ಬಣದವರಿಗೂ ಸೂಚಿಸಿದೆ.
Advertisement
Advertisement
ಕಳೆದ ತಿಂಗಳು ಶಿಂಧೆ ಮತ್ತು ಸುಮಾರು 40 ಶಾಸಕರು ಬಂಡಾಯವೆದ್ದು, ಬಿಜೆಪಿಯ ಬೆಂಬಲದೊಂದಿಗೆ ಹೊಸ ಸರ್ಕಾರವನ್ನು ರಚಿಸಿದೆ. ಇದಾದ ನಂತರ ಉಭಯ ಪಕ್ಷಗಳು ಪಕ್ಷದಲ್ಲಿನ ವಿವಾದದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿವರಿಸುವ ಲಿಖಿತ ಹೇಳಿಕೆಗಳನ್ನು ನೀಡಿದೆ.
Advertisement
ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಶಿಂಧೆ ತಂಡವು 55 ಶಾಸಕರ ಪೈಕಿ 40 ಶಾಸಕರು ಮತ್ತು 18 ಲೋಕಸಭೆಯ 12 ಸಂಸದರ ಬೆಂಬಲವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು ವರುಣಾ ರಹಸ್ಯ – ಸಿದ್ದುಗೆ ಗುಟ್ಟು ಬಿಟ್ಟುಕೊಟ್ಟಿದ್ರು ಬಿಎಸ್‍ವೈ
Advertisement
ಈ ಬಗ್ಗೆ ಚುನಾವಣಾ ಆಯೋಗ ನೀಡಿರುವ ನೋಟಿಸ್‍ನಲ್ಲಿ, ಶಿವಸೇನೆಯಲ್ಲಿ ಒಡಕು ಇರುವುದು ಸ್ಪಷ್ಟವಾಗಿದೆ. ಅದರಲ್ಲಿ ಒಂದು ಗುಂಪನ್ನು ಏಕನಾಥ್ ಶಿಂಧೆ ಮುನ್ನಡೆಸುತ್ತಿದ್ದಾರೆ ಮತ್ತು ಇನ್ನೊಂದು ಗುಂಪನ್ನು ಉದ್ಧವ್ ಠಾಕ್ರೆ ಮುನ್ನಡೆಸುತ್ತಿದ್ದಾರೆ. ಎರಡು ಗುಂಪುಗಳು ತಮ್ಮ ನಾಯಕರಾಗಿರುವ ನಿಜವಾದ ಶಿವಸೇನಾ ಪಕ್ಷದ ಅಧ್ಯಕ್ಷ ಎಂದು ಹೇಳುತ್ತಿದ್ದಾರೆ. ಆದರೆ ಎರಡೂ ಪ್ರತಿಸ್ಪರ್ಧಿ ಗುಂಪುಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ಹಿಂದಿನ ಆದ್ಯತೆಯ ಪ್ರಕಾರ, ಪ್ರತಿಸ್ಪರ್ಧಿ ಗುಂಪುಗಳು ಸಲ್ಲಿಸಿದ ದಾಖಲೆಗಳನ್ನು ನೀಡಲು ತಿಳಿಸಿದೆ. ಇದನ್ನೂ ಓದಿ: ಪಂಜಾಬ್ ಸಿಎಂ ಆಯ್ಕೆ ವಿರೋಧಿಸಿ ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ