ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಹಮ್ಜಾ ಶಹಬಾಜ್ ಅವರ ಆಯ್ಕೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದಿದೆ. ಈ ಬೆನ್ನಲ್ಲೇ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
Advertisement
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪರ್ವೇಜ್ ಇಲಾಹಿ ವಿರುದ್ಧ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ನಾಯಕ ಹಮ್ಜಾ ಶಹಬಾಜ್ ಅವರು ಪಂಜಾಬ್‌ನ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್-ಕ್ವಾಡ್ (PML-Q) ಮತಗಳನ್ನು ಪಂಜಾಬ್ ವಿಧಾನಸಭೆ ಉಪ ಸಭಾಪತಿ ತಿರಸ್ಕರಿಸಿದ ಬಳಿಕ ಅವರು ಜಯ ಸಾಧಿಸಿದ್ದಾರೆ. ಇದನ್ನೂ ಓದಿ: 75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ಮನೆಗೆ ಹೋಗಿ 90ರ ಅಜ್ಜಿ ಭಾವುಕ
Advertisement
ಪಿಟಿಐ ಮತ್ತು ಪಿಎಂಎಲ್-ಕ್ಯೂ ಜಂಟಿ ಅಭ್ಯರ್ಥಿ ಪರ್ವೈಜ್ ಇಲಾಹಿ 186 ಮತಗಳನ್ನು ಪಡೆದರೆ, ಹಮ್ಜಾ ಶಹಬಾಜ್ 179 ಮತಗಳನ್ನು ಪಡೆದಿದ್ದರು. ಆದರೆ ಪಿಎಂಎಲ್-ಕ್ಯೂನ 10 ಮತಗಳನ್ನು ಡೆಪ್ಯುಟಿ ಸ್ಪೀಕರ್ ದೋಸ್ತ್ ಮುಹಮ್ಮದ್ ಮಜಾರಿ ಅವರು ತಿರಸ್ಕರಿಸಿದ್ದರಿಂದಾಗಿ ಪರ್ವೈಜ್ ಇಲಾಹಿ ಅವರು 176 ಮತಗಳನ್ನು ತೆಗೆದುಕೊಂಡರು. ಇದರಿಂದಾಗಿ ಇಲಾಹಿಗೆ ಸೋಲುಂಟಾಯಿತು.
Advertisement
ಸಿಎಂ ಆಗಿ ಮರು ಆಯ್ಕೆಯಾದ ಬಳಿಕ ಮಾತನಾಡಿದ ಹಮ್ಜಾ ಶಹಬಾಜ್, `ಕೆಲವರು ಆಯ್ಕೆ ವಿರುದ್ಧ ಈಗ ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಆದರೆ ಸಂಸತ್ತಿಗೆ ನೈತಿಕತೆಯ ಅಧಿಕಾರವಿದೆ. ಪ್ರಜಾಪ್ರಭುತ್ವವು ನೈತಿಕತೆಯ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ
Advertisement
ಸಿಎಂ ಆಯ್ಕೆ ಕುರಿತು ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಂಜಾಬ್ ಮುಖ್ಯಮಂತ್ರಿ ಚುನಾವಣೆಯ ಬೆಳವಣಿಗೆಯನ್ನು ಕುದುರೆ ವ್ಯಾಪಾರಕ್ಕೆ ಹೋಲಿಸಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ನಾಯಕ ಆಸಿಫ್ ಜರ್ದಾರಿ ವಿರುದ್ಧ ಕಿಡಿಕಾರಿದ್ದಾರೆ. ದೇಶದ ದೊಡ್ಡ ಡಕಾಯಿತ ಆಸಿಫ್ ಜರ್ದಾರಿ 30 ವರ್ಷಗಳಿಂದ ದೇಶವನ್ನು ದರೋಡೆ ಮಾಡುತ್ತಿದ್ದಾನೆ ದೂರಿದ್ದಾರೆ.
ಬೇರೆ ಯಾವುದೇ ಸಮಾಜದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಇಂದು ರಾತ್ರಿ ಪಂಜಾಬ್ ಅಸೆಂಬ್ಲಿ ಬೆಳವಣಿಗೆಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ದಾಖಲಿಸಲು ನಾನು ರಾಷ್ಟ್ರಕ್ಕೆ ಮನವಿ ಮಾಡುತ್ತೇನೆ ಎಂದು ಕರೆ ನೀಡಿದ್ದಾರೆ.