ಕನ್ನಡದಲ್ಲೇ ಗಣೇಶೋತ್ಸವ ಶುಭಾಶಯ ತಿಳಿಸಿದ RCB – ಅಭಿಮಾನಿಗಳು ಫುಲ್‌ ಖುಷ್‌

Public TV
2 Min Read
RCB

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ನಾಡಿನ ಸಮಸ್ತ ಜನತೆಗೆ ಹಾಗೂ ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಕನ್ನಡದಲ್ಲೇ ಗಣೇಶೋತ್ಸವದ ಶುಭಾಶಯ (Happy Ganesh Chaturthi) ಕೋರಿದೆ.

ನಾಡಿನಾದ್ಯಂತ ಗಣೇಶ ಹಬ್ಬದ (Ganesha Chaturthi) ಸಂಭ್ರಮ ಮನೆ ಮಾಡಿದೆ. ಮನೆ-ಮನೆಯಲ್ಲಿ, ನೆರೆ ಹೊರೆಯಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ ವಿಘ್ನೇಶ್ವರನ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ನೋಟು, ನಾಣ್ಯ ಮಧ್ಯೆ ಗಣಪನ ಪ್ರತಿಷ್ಠಾಪನೆ- ಕೋಟಿ ಕೋಟಿ ರೂಪಾಯಿಗಳಲ್ಲಿ ದೇಗುಲ ಸಿಂಗಾರ

ಈ ನಡುವೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅಭಿಮಾನಿಗೂ ಸೇರಿದಂತೆ ರಾಜ್ಯದ ಜನರಿಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದೆ. ನಾಡಿನ ಸಮಸ್ತ ಜನರಿಗೆ ಗೌರಿ – ಗಣೇಶ ಹಬ್ಬದ ಶುಭಾಶಯಗಳು. ವಿಘ್ನ ನಿವಾರಕ ಎಲ್ಲರಿಗೂ ನೆಮ್ಮದಿ, ಯಶಸ್ಸು, ಸಮೃದ್ಧಿ ಮತ್ತು ಆರೋಗ್ಯಭಾಗ್ಯ ಕರುಣಿಸಲಿ ಎಂದು ಆಶಿಸುತ್ತೇವೆ ಎಂದು ಟ್ವಿಟ್ಟರ್‌ (X) ಖಾತೆಯಲ್ಲಿ ಶುಭಾಶಯ ಕೋರಿದೆ. ಇದಕ್ಕಾಗಿ ವಿಶೇಷ ವೀಡಿಯೋವೊಂದನ್ನೂ ಹಂಚಿಕೊಂಡಿದೆ.

ಕ್ರೀಡೆಯೊಂದೇ ಅಲ್ಲದೇ ಸಾಂಪ್ರದಾಯಿಕ ಹಬ್ಬದ ಸಂಭ್ರಮದಲ್ಲೂ ಆರ್‌ಸಿಬಿ ತಂಡ ಭಾಗಿಯಾಗುತ್ತಿರುವುದನ್ನು ಕಂಡು ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ!

Web Stories

Share This Article