ಮಂಡ್ಯ: ಹಳೇ ದೇಷದ ಹಿನ್ನೆಲೆ, ರೌಡಿಶೀಟರ್ ಮೇಲೆ ರೌಡಿಶೀಟರ್‍ಗಳೇ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಕಸ್ತೂರ್‍ಬಾ ಶಾಲೆ ಬಳಿ ಘಟನೆ ನಡೆದಿದೆ.
ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮದ್ದೂರು ಪಟ್ಟಣದ ರೌಡಿಶೀಟರ್ ವರುಣ್ ಮೇಲೆ ಲಾಂಗು, ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ವರುಣ್ ಬಲಗೈ ಕಟ್ ಆಗಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ.
ರೌಡಿಶೀಟರ್‍ಗಳಾದ ಸೂರಜ್, ಅಕ್ಷಯ್, ವ್ಯಾಸ, ಸುಹಾಸ್, ಶಿವರಾಜ್, ಪುಟಾಣಿ, ರಾಜೇಶ್, ಗಿರಿ, ವಿನಯ್ ಎಂಬುವರಿಂದ ಹಲ್ಲೆ ನಡೆದಿದೆ. ಗಾಯಾಳು ವರುಣ್‍ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರೌಡಿಶೀಟರ್ ವರುಣ್ ಒಂದೂವರೆ ತಿಂಗಳ ಹಿಂದೆ ವ್ಯಕ್ತಿಯೊಬ್ಬರ ಹತ್ಯೆಗೆ ಯತ್ನಿಸಿ ಜೈಲಿಗೆ ಹೋಗಿದ್ದು, ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಎನ್ನಲಾಗಿದೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.