ಮುಂಬೈ: ಟಿ20 ವಿಶ್ವಕಪ್ 2024ರ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಟೀಂ ಇಂಡಿಯಾದ ಜೆರ್ಸಿ (Team India’s Jersey) ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಸೋರಿಕೆಯಾದ ಚಿತ್ರಗಳಲ್ಲಿ ಜೆರ್ಸಿಯು ವಿ-ಆಕಾರದ ಕುತ್ತಿಗೆಯ ಮೇಲೆ ತ್ರಿವರ್ಣದ ಪಟ್ಟಿಗಳನ್ನು ಹೊಂದಿದೆ. ಟೀಂ ಇಂಡಿಯಾದ ಹೊಸ ಕಿಟ್ ಸೋಷಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಸಹ ಹಲವು ಬಾರಿ ತಂಡದ ಜೆರ್ಸಿ ವೈರಲ್ ಆಗಿತ್ತು. ಆದರೆ ತಂಡದ ಕಿಟ್ ಬಿಡುಗಡೆಯನ್ನು ಸಾಮಾನ್ಯವಾಗಿ ಔಪಚಾರಿಕ ಚಾನೆಲ್‍ಗಳ ಮೂಲಕ ಮಾಡುವುದರಿಂದ ಇದು ದೊಡ್ಡ ಹೊಡೆತವಾಗಿದೆ. ಇದನ್ನೂ ಓದಿ: T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್!
Advertisement
Advertisement
ಬಿಸಿಸಿಐ (BCCI) ಇತ್ತೀಚೆಗೆ 2024 ರ ಟಿ20 ವಿಶ್ವಕಪ್‍ಗಾಗಿ 15 ಜನರ ತಂಡವನ್ನು ಹೆಸರಿಸಿತ್ತು. ಇದರೊಂದಿಗೆ 4 ಮೀಸಲು ಆಟಗಾರರನ್ನು ಸಹ ಹೆಸರಿಸಿತ್ತು.
Advertisement
ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಎಸ್.ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಸಿರಾಜ್, ವಿಕೆಟ್ ಕೀಪರ್‌ಗಳಾಗಿ ರಿಷಬ್ ಪಂತ್, ಎಸ್.ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ.
Advertisement
ಮೀಸಲು ಆಟಗಾರರು
ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್. ಇದನ್ನೂ ಓದಿ: T20 ವಿಶ್ವಕಪ್ ಟೂರ್ನಿ ಮೇಲೆ ಉಗ್ರರ ಕರಿನೆರಳು – ಪಾಕ್‌ನಿಂದ ಭಯೋತ್ಪಾದಕ ದಾಳಿ ಬೆದರಿಕೆ!