ICC World Cup: 20 ವರ್ಷಗಳ ಬಳಿಕ ಟೀಂ ಇಂಡಿಯಾದ ಸತತ 8ನೇ ಗೆಲುವು

Public TV
2 Min Read
Team India 1 1

ಬೆಂಗಳೂರು: ಐಸಿಸಿ ವಿಶ್ವಕಪ್ (ICC World Cup) ಕ್ರಿಕೆಟ್ ಟೂರ್ನಿಯಲ್ಲಿ ಭಾರತ 20 ವರ್ಷಗಳ ಬಳಿಕ ಸತತ 8 ಏಕದಿನ ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ ಭಾರತ ತಂಡವು 2003ರಲ್ಲಿ ಸತತ 8 ಪಂದ್ಯಗಳನ್ನು ಗೆದ್ದಿತ್ತು.

ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ (Team India) ಇದುವರೆಗೆ 8 ಪಂದ್ಯಗಳನ್ನು ಆಡಿದ್ದು, 8 ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

2023ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ‘ಅಷ್ಟ’ಜಯ!
ಮ್ಯಾಚ್ 1: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು
ಮ್ಯಾಚ್ 2: ಆಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು
ಮ್ಯಾಚ್ 3: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
ಮ್ಯಾಚ್ 4: ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು
ಮ್ಯಾಚ್ 5: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು
ಮ್ಯಾಚ್ 6: ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು
ಮ್ಯಾಚ್ 7: ಶ್ರೀಲಂಕಾ ವಿರುದ್ಧ 302 ರನ್ ಗೆಲುವು
ಮ್ಯಾಚ್ 8: ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು

IND vs Aus 1

ಒನ್ ಡೇ ಮ್ಯಾಚಲ್ಲಿ ದಕ್ಷಿಣ ಆಫ್ರಿಕಾದ ಬೃಹತ್ ಸೋಲು: ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ (Odi Series) ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 243 ರನ್ ಗಳಿಂದ ಸೋತಿದೆ. ಇದು ದಕ್ಷಿಣ ಆಫ್ರಿಕಾದ ಬೃಹತ್ ಅಂತರದ ಸೋಲು ಎನ್ನುವುದು ಇಲ್ಲಿ ಗಮನಾರ್ಹ. ಇದಕ್ಕೂ ಮುನ್ನ 2002ರಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 182 ರನ್ ಗಳಿಂದ ಸೋಲಿಸಿತ್ತು. ಭಾರತ ತಂಡ ಇದಕ್ಕೂ ಮುನ್ನ 2010ರಲ್ಲಿ 153 ರನ್‌ಗಳ ಅಂತರದಿಂದ ಸೋಲಿಸಿದ್ದೇ ಟೀಂ ಇಂಡಿಯಾ ಪಾಲಿನ ದಾಖಲೆಯಾಗಿತ್ತು.

2015ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೆಲ್ಬರ್ನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 130 ರನ್ ಗಳಿಂದ ಸೋಲಿಸಿದ್ದೇ ವಿಶ್ವಕಪ್ ನ ದಾಖಲೆಯಾಗಿತ್ತು.

INDIA 6

ವಿಶ್ವಕಪ್ ನಲ್ಲಿ ಆಫ್ರಿಕಾ ಕನಿಷ್ಠ ಮೊತ್ತ!
ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಪಂದ್ಯದಲ್ಲಿ 100 ರನ್ ಗಿಂತಲೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಈ ಹಿಂದೆ ಆಸ್ಟ್ರೇಲಿಯಾ ತಂಡವು 2007ರಲ್ಲಿ ದಕ್ಷಿಣ ಆಫ್ರಿಕಾವನ್ನು 149 ರನ್ ಗಳಿಗೆ ಆಲೌಟ್ ಮಾಡಿತ್ತು. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದ.ಆಫ್ರಿಕಾ 83 ರನ್ ಗೆ ಆಲೌಟ್ ಆಗಿದೆ. ಈ ಹಿಂದೆ ಎರಡು ಬಾರಿ ಇಂಗ್ಲೆಂಡ್ ವಿರುದ್ಧ 83 ರನ್ ಗೆ ದಕ್ಷಿಣ ಆಫ್ರಿಕಾ ಆಲೌಟ್ ಆಗಿತ್ತು. 1993ರಲ್ಲಿ ಆಸ್ಟ್ರೇಲಿಯಾ ವಿರುದ್ಧ 69 ರನ್ ಗಳಿಗೆ ಆಲೌಟ್ ಆಗಿದ್ದೇ ದಕ್ಷಿಣ ಆಫ್ರಿಕಾ ತಂಡದ ಏಕದಿನ ಇತಿಹಾಸದ ಅತಿ ಕಡಿಮೆ ರನ್ ದಾಖಲೆಯಾಗಿದೆ.

Share This Article