ಕೋಲ್ಕತ್ತಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು (Mamta Banerjee) ಟೀಂ ಇಂಡಿಯಾ ವಿಶ್ವಕಪ್ ಸೋತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಪರೋಕ್ಷವಾಗಿ ದೂರಿದ್ದಾರೆ.
ಕೋಲ್ಕತ್ತಾ ನೇತಾಜಿ ಇಂಡೋರ್ ಕ್ರೀಡಂಗಣದಲ್ಲಿ ಟಿಎಂಸಿ (TMC) ಕಾರ್ಯಕರ್ತರ ಸಭೆಯಲ್ಲಿ ದೀದಿ ಮಾತನಾಡಿದರು. ಪಾಪಿಗಳು ಹಾಜರಾದ ಫೈನಲ್ ಪಂದ್ಯ ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಜಯಗಳಿಸಿದೆ. ವಿಶ್ವಕಪ್ 20203ರ (World Cup) ಫೈನಲ್ ಪಂದ್ಯವು ಕೋಲ್ಕತ್ತಾ ಅಥವಾ ಮುಂಬೈನಲ್ಲಿ ನಡೆಯುತ್ತಿದ್ದರೆ ಭಾರತ ಗೆಲುವು ಸಾಧಿಸುತ್ತಿತ್ತು ಎಂದು ಅವರು ತಿಳಿಸಿದರು.
Advertisement
Advertisement
ಕೋಲ್ಕತ್ತಾದ ಈಡನ್ ಗಾರ್ಡನ್ ಅಥವಾ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ಫೈನಲ್ ಪಂದ್ಯ ನಡೆಯುತ್ತಿದ್ದರೆ ನಾವು ಗೆಲ್ಲುತ್ತಿದ್ದೆವು ಎಂದು ನಾನು ಈ ಸಂದರ್ಭದಲ್ಲಿ ಹೇಳಬಲ್ಲೆ. ಬಿಜೆಪಿಯವರು ಅವರಿಗೆ ಕೇಸರಿ ಜೆರ್ಸಿಯನ್ನು ನಿಡಿದ್ದಾರೆ ಎಂದು ಮಮತಾ ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿ ಅಪಶಕುನ, ಐರೆನ್ ಲೆಗ್- ವಿಶ್ವಕಪ್‌ನಲ್ಲಿ ಸೋತಿದ್ದಕ್ಕೆ ಪ್ರಧಾನಿಯನ್ನು ಹೀಯಾಳಿಸಿದ ರಾಗಾ
Advertisement
Advertisement
ಭಾರತೀಯ ಕ್ರಿಕೆಟ್ (Team India) ಆಟಗಾರರು ಪಂದ್ಯದ ವೇಳೆ ಕೇಸರಿ ಜೆರ್ಸಿಗಳನ್ನು ಧರಿಸಲಿಲ್ಲ ಎಂದರು. ಆಟಗಾರರ ಜೆರ್ಸಿ ನೀಲಿ ಬಣ್ಣದ್ದಾಗಿದ್ದು, ಅಭ್ಯಾಸದ ಸಮಯದಲ್ಲಿ ಆರೆಂಜ್ ಜೆರ್ಸಿ ಧರಿಸುತ್ತಿದ್ದರು. ಎಲ್ಲಾ ಫೆಡರೇಶನ್‍ಗಳನ್ನು ರಾಜಕೀಯ ಪಕ್ಷಗಳು ವಶಪಡಿಸಿಕೊಂಡಿವೆ. ಕ್ರಿಕೆಟ್ ಹಾಗೂ ಕಬಡ್ಡಿಯಲ್ಲಿಯೂ ಕೇಸರಿ ಬಣ್ಣವನ್ನು ಬಳಸಲಾಗುತ್ತದೆ. ಕೇಸರಿ ಬಣ್ಣವು ತ್ಯಾಗಿಗಳ ಬಣ್ಣವಾಗಿತ್ತು, ಆದರೆ ನೀವು ಭೋಗಿಗಳು (ಲೌಕಿಕ ವ್ಯಕ್ತಿ) ಎಂದು ಕಿಡಿಕಾರಿದರು.
ಈ ಹಿಂದೆ ಮಾತನಾಡಿದ್ದ ದೀದಿ, ಬಿಜೆಪಿ ಪಕ್ಷವು ಭಾರತೀಯ ಕ್ರಿಕೆಟ್ ತಂಡವನ್ನು ಒಳಗೊಂಡಂತೆ ದೇಶಾದ್ಯಂತ ವಿವಿಧ ಸಂಸ್ಥೆಗಳನ್ನು ಕೇಸರಿಕರಣಗೊಳಿಸಿದೆ ಎಂದು ಪ್ರತಿಪಾದಿಸಿದ್ದರು. ಈಗ ಎಲ್ಲವೂ ಕೇಸರಿ ಬಣ್ಣಕ್ಕೆ ತಿರುಗುತ್ತಿದೆ. ನಮ್ಮ ಭಾರತೀಯ ಆಟಗಾರರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಅವರು ವಿಶ್ವ ಚಾಂಪಿಯನ್ ಆಗುತ್ತಾರೆ ಎಂದು ನಾನು ನಂಬುತ್ತೇನೆ. ಆದರೆ ಅಭ್ಯಾಸ ಮಾಡುವಾಗ ಅವರ ಉಡುಗೆ ಕೂಡ ಕೇಸರಿ ಬಣ್ಣಕ್ಕೆ ತಿರುಗಿತು. ಅವರು ಮೊದಲು ನೀಲಿ ಬಣ್ಣವನ್ನು ಧರಿಸುತ್ತಿದ್ದರು ಎಂದು ಅವರು ಹೇಳಿದ್ದರು.
ರಾಹುಲ್ ಗಾಂಧಿ ಹೇಳಿದ್ದೇನು..?: ರಾಜಸ್ಥಾನದ ಜಲೋರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ (Narendra Modi) ಅಪಶಕುನ. ಅವರದ್ದು ಐರೆನ್ ಲೆಗ್. ಹೀಗಾಗಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೀಯಾಳಿಸಿದ್ದರು. ನಮ್ಮ ಹುಡುಗರು ಬಹುತೇಕ ವಿಶ್ವಕಪ್ ಗೆಲ್ಲುತ್ತಿದ್ದರು. ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿಯೇ ಅಖಾಡಕ್ಕಿಳಿದಿದ್ದರು. ಆದರೆ ಕೆಟ್ಟ ಶಕುನವೊಂದು ಮೈದಾನ ಪ್ರವೇಶಿಸಿದ ಪರಿಣಾಮ ಕಪ್ ಕಳೆದುಕೊಳ್ಳುವಂತೆ ಮಾಡಿದೆ. ಅಲ್ಲದೇ ರಾಹುಲ್ ಗಾಂಧಿಯವರು ಜನರಿಂದಲೂ ಅಪಶುಕುನ ಎನ್ನುವ ಪದ ಹೇಳಿಸಿದ್ದರು.