ಮುಂಬೈ: 2023ರ ಏಕದಿನ ಏಷ್ಯಾಕಪ್ (Asia Cup 2023) ಮುಡಿಗೇರಿಸಿಕೊಂಡ ಭಾರತ ತಂಡ ಇದೀಗ ವಿಶ್ವಕಪ್‌ಗೂ (W0rld Cup) ಮುನ್ನ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿದೆ.
ಈ ಸರಣಿಯ ನಿಮಿತ್ತ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ (BCCI) ಅಯ್ಕೆ ಸಮಿತಿಯು ಭಾರತ ತಂಡವನ್ನು ಸೋಮವಾರ ಪ್ರಕಟಿಸಿದೆ. ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಅವಕಾಶ ನೀಡಿದೆ. ವಿಶೇಷವೆಂದರೆ ಇದರಲ್ಲಿ ಮೊದಲೆರಡು ಪಂದ್ಯಗಳಿಗೆ ಕೆ.ಎಲ್ ರಾಹುಲ್‌ಗೆ (KL Rahul) ನಾಯಕತ್ವ ನೀಡಲಾಗಿದ್ದು, ರವೀಂದ್ರ ಜಡೇಜಾ (Ravindra Jadeja) ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ನಂ.1 – ಅಗ್ರಸ್ಥಾನಕ್ಕೇರಲು ಭಾರತಕ್ಕಿದೆಯಾ ಚಾನ್ಸ್?
Advertisement
Coming ???? next ???? #INDvAUS
Here are the #TeamIndia squads for the IDFC First Bank three-match ODI series against Australia ???? pic.twitter.com/Jl7bLEz2tK
— BCCI (@BCCI) September 18, 2023
Advertisement
ಅಲ್ಲದೇ ಮೊದಲ ಎರಡು ಪಂದ್ಯಗಳಿಗೆ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಹಾಗೂ ಸೂರ್ಯಕುಮಾರ್ ಯಾದವ್‌ಗೂ ಅವಕಾಶ ನೀಡಲಾಗಿದೆ. ಆರಂಭಿಕ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ತಂಡವನ್ನು ಕೆ.ಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು – ಜೈಹೋ ಟೀಂ ಇಂಡಿಯಾ ಎಂದ ಡಿಕೆಶಿ
Advertisement
ಸೆಪ್ಟಂಬರ್ 22 ರಂದು ಉಭಯ ತಂಡಗಳ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಅಕ್ಟೋಬರ್ 5 ರಂದು ಆರಂಭವಾಗುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಲು ಈ ಸರಣಿ ಈ ಎರಡೂ ತಂಡಗಳಿಗೆ ಕೊನೆಯ ಅವಕಾಶವಾಗಿದೆ. ಭಾರತದಲ್ಲಿಯೇ 50 ಓವರ್‌ಗಳ ವಿಶ್ವಕಪ್ ನಡೆಯುವ ಕಾರಣ ಆಸ್ಟ್ರೇಲಿಯಾ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವವನ್ನ ಪಡೆದುಕೊಂಡಿದೆ.
Advertisement
ಅಯ್ಯರ್, ಅಕ್ಷರ್ ಪಟೇಲ್‌ಗೆ ಸ್ಥಾನ
Squad for the 3rd & final ODI:
Rohit Sharma (C), Hardik Pandya, (Vice-captain), Shubman Gill, Virat Kohli, Shreyas Iyer, Suryakumar Yadav, KL Rahul (wicketkeeper), Ishan Kishan (wicketkeeper), Ravindra Jadeja, Shardul Thakur, Axar Patel*, Washington Sundar, Kuldeep Yadav, R…
— BCCI (@BCCI) September 18, 2023
ಏಷ್ಯಾ ಕಪ್ ಟೂರ್ನಿಯ ವೇಳೆ ಮತ್ತೆ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಅವರು ಆಸ್ಟ್ರೇಲಿಯಾ ತವರು ಏಕದಿನ ಸರಣಿಯ ಭಾರತ ತಂಡಕ್ಕೆ ಮರಳಿದ್ದಾರೆ. ಇನ್ನು ಬಾಂಗ್ಲಾದೇಶ ವಿರುದ್ಧ ಏಷ್ಯಾ ಕಪ್ ಸೂಪರ್-4ರ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಅಕ್ಷರ್ ಪಟೇಲ್ ಅವರು 3ನೇ ಹಾಗೂ ಅಂತಿಮ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಆದ್ರೆ ಅವರ ಫಿಟ್ ಪರಿಣಾಮದ ಮೇಲೆ ಕಣಕ್ಕಿಳಿಯುವುದು ನಿರ್ಧಾರವಾಗುತ್ತದೆ.
1 ಮತ್ತು 2ನೇ ಏಕದಿನ ಪಂದ್ಯಕ್ಕೆ ಭಾರತ ತಂಡ:
ಕೆ.ಎಲ್ ರಾಹುಲ್ (ನಾಯಕ ಹಾಗೂ ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಆರ್.ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ.
3ನೇ ಒಡಿಐಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಆರ್. ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮ್ಮಿನ್ಸ್ (ನಾಯಕ), ಶೇನ್ ಅಬಾಟ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜಾಶ್ ಹೇಝಲ್‌ವುಡ್, ಜಾಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಗ್ಲೇನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್ ಹಾಗೂ ಆಡಮ್ ಝಂಪಾ.
ಏಕದಿನ ಸರಣಿ ಎಲ್ಲಿ – ಯಾವಾಗ?
1ನೇ ಪಂದ್ಯ: ಸೆ.22, 2023- ಮಧ್ಯಾಹ್ನ: 01:30ಕ್ಕೆ (ಮೊಹಾಲಿ)
2ನೇ ಪಂದ್ಯ: ಸೆ.24, 2023- ಮಧ್ಯಾಹ್ನ: 01:30ಕ್ಕೆ (ಇಂದೋರ್)
3ನೇ ಏಕದಿನ ಪಂದ್ಯ: ಸೆ.27- ಮಧ್ಯಾಹ್ನ: 01:30ಕ್ಕೆ (ರಾಜ್‌ಕೋಟ್)
Web Stories