ಮುಂಬೈ: ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಆಟಗಾರರು ಕೇಸರಿ ಜೆರ್ಸಿ (Orange Jersey) ಧರಿಸಿ ಕಣಕ್ಕೆ ಇಳಿಯುತ್ತಾರಾ? – ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಮಾಧ್ಯಮವೊಂದು ಅ.14 ಶನಿವಾರ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿಯಲಿದೆ ಎಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ.
ವರದಿ ಪ್ರಕಟವಾದ ಬೆನ್ನಲ್ಲೇ ಬಿಸಿಸಿಐ (BCCI) ಪ್ರತಿಕ್ರಿಯಿಸಿದೆ. ಟೀಂ ಇಂಡಿಯಾ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ನೀಲಿ ಬಣ್ಣದ ಜೆರ್ಸಿ ಧರಿಸಿ ಆಡಲಿದ್ದಾರೆ ಎಂದು ಬಿಸಿಸಿಐ ಖಜಾಂಚಿಯಾಗಿರುವ ಆಶಿಶ್ ಶೆಲಾರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನ ಗೆದ್ದ ಕೊಹ್ಲಿ
ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಬೇರೆ ಕಿಟ್ ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಯಾರೊಬ್ಬರ ಕಲ್ಪನೆಯ ಕೆಲಸವಾಗಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಮೆನ್ ಇನ್ ಬ್ಲೂ ನಿಲ್ಲಿ ಬಣ್ಣ ಜೆರ್ಸಿ ಧರಿಸಲಿದೆ ಎಂದು ತಿಳಿಸಿದ್ದಾರೆ.
ಭಾರತ ತಂಡದ ಆಟಗಾರರು ಅಭ್ಯಾಸದ ವೇಳೆ ತಿಳಿ ಕೇಸರಿ ಬಣ್ಣದ ಜೆರ್ಸಿ ಧರಿಸುತ್ತಿದ್ದರೂ ಪಂದ್ಯದ ವೇಳೆ ನೀಲಿ ಬಣ್ಣದ ಜೆರ್ಸಿಯಲ್ಲೇ ಆಡುತ್ತಿದ್ದಾರೆ
2019ರಲ್ಲಿ ಕೇಸರಿ ಜೆರ್ಸಿ ಧರಿಸಿದ್ದ ಟೀಂ ಇಂಡಿಯಾ:
ಇಂಗ್ಲೆಂಡಿನಲ್ಲಿ ನಡೆದ 2019ರ ವಿಶ್ವಕಪ್ ಕ್ರಿಕೆಟ್ ವೇಳೆ ಭಾರತ ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿದಿತ್ತು. ಫುಟ್‌ಬಾಲ್ ಆಡುವಾಗ ಎರಡು ತಂಡಗಳ ಒಂದೇ ಬಣ್ಣದ ಜರ್ಸಿ ಧರಿಸುವುದಿಲ್ಲ. ಈ ನಿಯಮವನ್ನೇ ಐಸಿಸಿ ಕ್ರಿಕೆಟಿಗೂ ಪರಿಚಯಿಸಿತ್ತು. ಇಂಗ್ಲೆಂಡ್ (England) ಮತ್ತು ಭಾರತ ನೀಲಿ ಜೆರ್ಸಿ ಹೊಂದಿತ್ತು. ಇಂಗ್ಲೆಂಡ್ ತವರು ತಂಡವಾಗಿದ್ದ ಕಾರಣ ಭಾರತ ನೀಲಿ ಮತ್ತು ಕೇಸರಿ ಬಣ್ಣದ ಜೆರ್ಸಿ ಧರಿಸಿ ಕಣಕ್ಕೆ ಇಳಿದಿತ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]