ಮುಂಬೈ/ಅಬುದಾಬಿ: 2025ರ ಚಾಂಪಿಯನ್ಸ್ ಟ್ರೋಫಿ (Champions Trophy 2025) ಎಲ್ಲಿ, ಯಾವಾಗ ನಡೆಯುತ್ತದೆ? ಎಂಬುದು ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಈ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಗೆ ಬರೆದ ಪತ್ರದಲ್ಲಿ ಉಗ್ರರ ದಾಳಿಯ (Terrorists Attack) ಭೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಈ ಬಾರಿ ʻಚಾಂಪಿಯನ್ಸ್ ಟ್ರೋಫಿʼಯ ಆತಿಥ್ಯ ಪಾಕ್ ಬಳಿಯೇ ಇದ್ದರೂ, ವಿಶ್ವದ ಪವರ್‌ಫುಲ್ ಕ್ರಿಕೆಟ್ ಸಂಸ್ಥೆ ಬಿಸಿಸಿಐ (BCCI) ನಿರ್ಧಾರದ ಮೇಲೆ ನಿಂತಿದೆ. ಬಿಸಿಸಿಐ ಬಿಲ್‌ಕುಲ್ ಬರಲ್ಲ ಎಂದು ಹೇಳಿದ್ದರೂ, ಪಾಕ್ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ. ಭಾರತ ಬಾರದಿದ್ದರೂ ಚಾಂಪಿಯನ್ಸ್ ಟ್ರೋಫಿ ಪಾಕ್‌ನಲ್ಲಿ (Pakistan) ನಡೆಸುವುದಾಗಿ ಪಟ್ಟು ಹಿಡಿದಿದೆ. ಅಲ್ಲದೇ ಟೀಂ ಇಂಡಿಯಾ ಪಾಕ್‌ಗೆ ಪ್ರಯಾಣಿಸದಿರಲು ಲಿಖಿತ ರೂಪದಲ್ಲಿ ಐಸಿಸಿಗೆ ಕಾರಣ ತಿಳಿಸುವಂತೆ ಹೇಳಿತ್ತು. ಅದರಂತೆ ಬಿಸಿಸಿಐ ಐಸಿಸಿಗೆ (ICC) ಕಾರಣ ತಿಳಿಸಿದೆ.
Advertisement
Advertisement
ಬಿಸಿಸಿಐ, ಐಸಿಸಿಗೆ ಬರೆದ ಪತ್ರದಲ್ಲಿ, ಟೀಂ ಇಂಡಿಯಾ (Team India) ಕ್ರಿಕೆಟ್ ಆಟಗಾರ ಸುರಕ್ಷತೆಯ ಬಗ್ಗೆ ಬಿಸಿಸಿಐ ಉಲ್ಲೇಖಿಸಿರುವುದಾಗಿ ʻಸ್ಪೋರ್ಟ್ಸ್ ಟಾಕ್ʼ ವರದಿ ಮಾಡಿದೆ. ಇದನ್ನೂ ಓದಿ: Ranji Trophy: ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್ ಕಿತ್ತು ದಾಖಲೆ ಬರೆದ ಅಂಶುಲ್ ಕಾಂಬೋಜ್
Advertisement
ಹೌದು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಬಿಸಿಸಿಐಗೆ ಕಳವಳವಿದೆ. ಈಗ ಗಡಿಯಾಚೆಗೆ ಭಯೋತ್ಪಾದನೆ ನಡೆಯುತ್ತಿದೆ. ಭಾರತೀಯ ಕ್ರಿಕೆಟ್ ತಂಡ ಸಾಮಾನ್ಯರಿಂದ ಪ್ರೀತಿ ಗಳಿಸಬಹುದಾದರೂ ಉಗ್ರರಿಂದ ದಾಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ. 2009ರ ಟಿ20 ವಿಶ್ವಕಪ್ ವೇಳೆ ಶ್ರೀಲಂಕಾ ತಂಡದ ಮೇಲೆ ಆಗಿದ್ದ ದಾಳಿಯೇ ಇದಕ್ಕೆ ಉದಾಹರಣೆ ಎಂದು ಬಿಸಿಸಿಐ, ಐಸಿಸಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ
Advertisement
ಸದ್ಯ ಬಿಸಿಸಿಐ ಮತ್ತು ಪಿಸಿಬಿ ತಮ್ಮ ನಿಲುವುಗಳಿಂದ ಹಿಂದೆ ಸರಿಯಲು ಸಿದ್ಧರಿಲ್ಲ. ಆದರೂ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಐಸಿಸಿ ಮೇಲಿದ್ದು, ಟೂರ್ನಿ ನಡೆಸಲು ಮೂರು ಆಯ್ಕೆಗಳು ಮಾತ್ರ ಇವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತ ಬರಲಿ, ಬಾರದೇ ಇರಲಿ ನಾವು ಚಾಂಪಿಯನ್ಸ್ ಟ್ರೋಫಿ ಆಯೋಜಿಸುತ್ತೇವೆ: ಪಾಕಿಸ್ತಾನ
ಆಯ್ಕೆ – 1
ಬಿಸಿಸಿಐಯ ಹೈಬ್ರಿಡ್ ಮಾದರಿಯ ಪ್ರಸ್ತಾಪ ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವರಿಕೆ ಮಾಡಿ, ಇದು ಪಂದ್ಯಾವಳಿಯ 15 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುವುದು.
ಆಯ್ಕೆ – 2
ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ತೆಗೆದುಹಾಕುವುದು. ಇದರಿಂದ ಟ್ರೋಫಿಯಿಂದ ಪಾಕ್ ತಂಡ ದೂರ ಉಳಿಯಲಿದೆ.
ಆಯ್ಕೆ – 3
ಅನಿರ್ದಿಷ್ಟಾವಧಿವರೆಗೆ ಚಾಂಪಿಯನ್ಸ್ ಟ್ರೋಫಿ ಮುಂದೂಡುವುದು. ಈ ನಿರ್ಧಾರವು ICC ಮತ್ತು PCB ಎರಡರ ಆದಾಯದ ಮೇಲೆ ಭಾರಿ ಪರಿಣಾಮ ಬೀರಬಹುದು.
2006ರಲ್ಲಿ ಭಾರತ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ನಂತರ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಪಾಲ್ಗೊಳ್ಳುತ್ತಿವೆ.