ಮೆಲ್ಬರ್ನ್: ವಿಶ್ವಕಪ್ (T20 WorldCup) ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ (Pakistan) ಹುಟ್ಟಡಗಿಸಿರುವ ಟೀಂ ಇಂಡಿಯಾ (Team India) ಗೆಲುವಿನ ನಗೆ ಬೀರಿದೆ.
Advertisement
ಅಲ್ಲದೇ ಇಂದು ನೆದರ್‌ಲೆಂಡ್‌ನೊಂದಿಗೆ (Netherlands) ಕಣಕ್ಕಿಳಿಯಲಿದೆ. ಆದರೆ ವಿಶ್ವಕಪ್‌ನಲ್ಲಿರುವ ಆಟಗಾರರಿಗೆ ಸರಿಯಾದ ಊಟ ಸಿಗುತ್ತಿಲ್ಲ ಎಂದು ಟೀಂ ಇಂಡಿಯಾ ಬೇಸರ ವ್ಯಕ್ತಪಡಿಸಿದೆ. ಅತೀ ತಣ್ಣಗಿನ ಹಾಗೂ ಗ್ರಿಲ್ ಮಾಡದ ಸ್ಯಾಂಡ್‌ವಿಚ್ ಹಾಗೂ ಬಟರ್‌ಫ್ರೂಟ್ ಅನ್ನೇ ನೀಡುತ್ತಿದ್ದಾರೆ. ಅದನ್ನು ಹೇಗೆ ತಿನ್ನುವುದು ಎಂದು ಬೇಸರ ಹೊರಹಾಕಿದೆ. ಇದನ್ನೂ ಓದಿ: ಭಾರತ-ಪಾಕ್ ಪಂದ್ಯದಲ್ಲಿ ಕಾಂಟ್ರವರ್ಸಿ – ಗೆಲುವಿನ ಬಳಿಕ ಅಗ್ರೇಸ್ಸಿವ್ ಮೂಡ್‍ನಲ್ಲಿ ದ್ರಾವಿಡ್
Advertisement
Gone are the days when one used to think that the Western countries offer so good hospitality. India are way ahead of most western countries when it comes to providing hospitality of the highest standards.
— Virender Sehwag (@virendersehwag) October 26, 2022
Advertisement
ಇದಕ್ಕೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag), ಸಿಡ್ನಿಯಲ್ಲಿ ನಡೆದ ತರಬೇತಿಯ ಅವಧಿಯ ನಂತರ ಟೀಂ ಇಂಡಿಯಾಕ್ಕೆ ತಣ್ಣಗಿನ ಆಹಾರ ಮತ್ತು ಸ್ಯಾಂಡ್‌ವಿಚ್‌ಗಳನ್ನ, ಫಲಾಫೆಲ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ
Advertisement
ಪಾಶ್ಚಿಮಾತ್ಯ ದೇಶಗಳು ಎಷ್ಟು ಒಳ್ಳೆಯ ಆತಿಥ್ಯ ನೀಡುತ್ತವೆ ಎಂದು ಭಾವಿಸುವ ದಿನಗಳು ಈಗ ಹೊರಟುಹೋಗಿವೆ. ಅತ್ಯುನ್ನತ ಗುಣಮಟ್ಟದ ಆತಿಥ್ಯ ನೀಡುವ ವಿಷಯದಲ್ಲಿ ಭಾರತ ಮಾತ್ರ ಪಾಶ್ಚಿಮಾತ್ಯ ದೇಶಗಳಿಗಿಂತ ಮುಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ ಇಂದು ನೆದರ್‌ಲೆಂಡ್‌ನೊಂದಿಗೆ ಕಣಕ್ಕಿಳಿಯಲಿದೆ. ಮಧ್ಯಾಹ್ನ 12.30ರ ವೇಳೆ ಆಸ್ಟ್ರೇಲಿಯಾದ ಎಸ್‌ಸಿಜೆ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿದೆ.