ಮೆಲ್ಬರ್ನ್: ಟಿ20 ವಿಶ್ವಕಪ್‍ನ (T20 World Cup) ನಿನ್ನೆಯ ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ಪಂದ್ಯದ ಗುಂಗಿನಿಂದ ಇನ್ನೂ ಅಭಿಮಾನಿಗಳು ಹೊರಬಂದಿಲ್ಲ. ಈ ನಡುವೆ ಪಂದ್ಯದಲ್ಲಿ ನಡೆದ ಕೆಲ ಕಾಂಟ್ರವರ್ಸಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಚರ್ಚೆಯಾಗುತ್ತಿದೆ.
Advertisement
ಮೆಲ್ಬರ್ನ್‍ನಲ್ಲಿ (Melbourne) ನಡೆದ ಹೈವೋಲ್ಟೆಜ್ ಪಂದ್ಯದಲ್ಲಿ ಎರಡು ತಂಡಗಳು ಕೂಡ ಗೆಲುವಿಗಾಗಿ ಜಿದ್ದಿಗೆ ಬಿದ್ದು ಹೋರಾಟ ನಡೆಸಿದವು. ಅಂತಿಮವಾಗಿ ಭಾರತ ತಂಡ 4 ವಿಕೆಟ್‍ಗಳ ರೋಚಕ ಜಯದೊಂದಿಗೆ ಸಂಭ್ರಮಿಸಿತು. ಇದೀಗ ಈ ಗೆಲುವಿನ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದೆ. ಇದನ್ನೂ ಓದಿ: Love You SO Much – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ಪಂದ್ಯದಲ್ಲಿ ನಡೆದ ಹೈಡ್ರಾಮಾಗಳ ಕುರಿತಾಗಿ ಹೆಚ್ಚು ಚರ್ಚೆಯಾಗುತ್ತಿದೆ. ಭಾರತ ಬ್ಯಾಟಿಂಗ್ ವೇಳೆ 6ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ (Axar Patel) ರನೌಟ್ (Run Out) ಭಾರಿ ಚರ್ಚೆಯಾಗುತ್ತಿದೆ. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಬಾಲ್ ಕೈಯಲ್ಲಿ ಹಿಡಿಯುವ ಮುನ್ನವೇ ಸ್ಟಂಪ್ ಎಗರಿಸಿದ್ದರು. ಬಳಿಕ ಬಾಲ್ ವಿಕೆಟ್‍ಗೆ ತಾಗಿರುವ ವೀಡಿಯೋ ತುಣುಕುಗಳನ್ನು ನೋಡಿ ಅಭಿಮಾನಿಗಳು ಈ ರನೌಟ್ ಕುರಿತಾಗಿ ಚಕಾರ ಎತ್ತಿದ್ದಾರೆ. ಇದನ್ನೂ ಓದಿ: OTTಯಲ್ಲೂ ದಾಖಲೆ ಬರೆದ ಇಂಡೋ-ಪಾಕ್ ಕದನ
Advertisement
The move to promote Axar Patel up the order does not work out for India. #INDvPAK | #T20WorldCup#PakVsInd pic.twitter.com/I8Zm1cUPAH
— Shair E Shahdara (@ChWahidAhmaPMLN) October 23, 2022
ಇನ್ನೊಂದೆಡೆ 19ನೇ ಓವರ್‌ನಲ್ಲಿ ಪಾಕ್ ಬೌಲರ್ ನವಾಝ್ ಎಸೆದ ನೋ ಬಾಲ್ (No Ball) ಕೂಡ ಹೆಚ್ಚು ಚರ್ಚೆಗೆ ಗುರಿಯಾಗಿದೆ. ಕೊಹ್ಲಿ (Virat Kohli) ನೋಬಾಲ್‍ಗೆ ಮನವಿ ಮಾಡಿದ ಬಳಿಕ ಅಂಪೈರ್ ನೋಬಾಲ್ ಎಂದು ಘೋಷಿಸಿದ್ದರು. ಈ ನೋಬಾಲ್ ಕುರಿತಾಗಿ ಪಾಕಿಸ್ತಾನದ ಆಟಗಾರರು ಮೈದಾನದಲ್ಲೇ ಅಂಪೈರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಆದರೂ ನೋಬಾಲ್ ಎಂದು ಅಂಪೈರ್ ನಿರ್ಧರಿಸಿದ್ದರು. ಜೊತೆಗೆ ಫ್ರೀ ಹಿಟ್ ನೀಡಲಾಯಿತು. ನಂತರ ಮರು ಎಸೆತ ವೈಡ್ ಆಗಿತ್ತು. ಈ ವೇಳೆ ಫ್ರೀ ಹಿಟ್ ಮರು ಎಸೆತಕ್ಕೂ ಮುಂದುವರಿದಿತ್ತು. ಮರು ಎಸೆತದಲ್ಲಿ ಕೊಹ್ಲಿ ಬೌಲ್ಡ್ ಆಗಿದ್ದರು. ಈ ವೇಳೆ ಬಾಲ್ ವಿಕೆಟ್‍ಗೆ ತಾಗಿ ಬೌಂಡರಿ ಲೈನ್‍ನತ್ತ ಹೋಗುತ್ತಿತ್ತು. ಕಾರ್ತಿಕ್ ಮತ್ತು ಕೊಹ್ಲಿ ಮೂರು ರನ್ ಓಡಿದರು. ಇದು ಕ್ರಿಕೆಟ್ ನಿಯಮಗಳ ಪ್ರಕಾರ ಬೈಸ್ ರನ್ ಆಗಿತ್ತು. ಆದರೆ ಈ ರನ್ ಕುರಿತಾಗಿ ಪಾಕಿಸ್ತಾನ ಆಟಗಾರರು ಪ್ರಶ್ನೆ ಮಾಡಿದರು. ಈ ಎಲ್ಲಾ ಇಂಟ್ರಸ್ಟಿಂಗ್ ಘಟನೆಯೊಂದಿಗೆ ಅಂತಿಮವಾಗಿ ಭಾರತ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ
Dravid Bhai on Fire ???????? pic.twitter.com/xDrEplzFSY
— Khushi | ಖುಷಿ | खुशी ???????? (@Khushi_Be) October 23, 2022
ಈ ಗೆಲುವನ್ನು ಭಾರತದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅಗ್ರೇಸ್ಸಿವ್ ಆಗಿ ಸೆಲೆಬ್ರೇಶನ್ ಮಾಡಿದ ವೀಡಿಯೋ ಕೂಡ ಇದೀಗ ವೈರಲ್ ಆಗುತ್ತಿದೆ. ದ್ರಾವಿಡ್ ಆಟಗಾರನಾಗಿದ್ದ ಮತ್ತು ಕೋಚ್ ಆಗಿದ್ದಾಗಲೂ ಸದಾ ಶಾಂತ ಚಿತ್ತರಾಗಿರುತ್ತಿದ್ದರು. ಆದರೆ ಪಾಕಿಸ್ತಾನ ವಿರುದ್ಧ ಭಾರತ ಜಯ ಸಾಧಿಸುತ್ತಿದ್ದಂತೆ ದ್ರಾವಿಡ್ ಅಗ್ರೇಸ್ಸಿವ್ ಆಗಿ ಸಂಭ್ರಮಿಸಿದ್ದು ಕಂಡು ಬಂತು.