– ದೇಶ ಉತ್ತುಂಗಕ್ಕೇರಲು ಕೈಲಾದಷ್ಟು ಕೊಡುಗೆ ನೀಡೋಣ ಎಂದ SKY
ಮುಂಬೈ: ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮ ಮನೆ ಮಾಡಿದೆ. ಗಣ್ಯಾತಿಗಣ್ಯರು ನಾಡಿನ ಜನತೆಗೆ ಸ್ವಾತಂತ್ರ್ಯ ದಿನದ ಶುಭ ಕೋರಿದ್ದಾರೆ. ಜೊತೆಗೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರು (Cricketers) ಸಹ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
Wishing everyone a Happy #IndependenceDay! Today we celebrate the freedom, diversity and progress of our nation. Let’s continue to build a bright and prosperous future for our country and keep the tricolor flying high! ????????#IndependenceDayIndia #JaiHind pic.twitter.com/b3a9JSBJkn
— Jay Shah (@JayShah) August 15, 2023
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟೀಂ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ಸೂರ್ಯಕುಮಾರ್ ಯಾದವ್ (Suryakumar Yadav), ರವೀಂದ್ರ ಜಡೇಜಾ, ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಸೇರಿದಂತೆ ಹಲವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: #HarGharTiranga: ಮೋದಿ ಕರೆಗೆ ಓಗೊಟ್ಟು ಡಿಪಿ ಬದಲಿಸಿ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಕಳೆದುಕೊಂಡ BCCI
Happy Independence Day to all. Jai Hind. ????????
— Virat Kohli (@imVkohli) August 15, 2023
ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, ನಾವಿಂದು ನಮ್ಮ ರಾಷ್ಟ್ರದ ಸ್ವಾತಂತ್ರ್ಯ, ವೈವಿಧ್ಯತೆ ಹಾಗೂ ಪ್ರಗತಿಯನ್ನ ಸಂಭ್ರಮಿಸುತ್ತಿದ್ದೇವೆ. ನಮ್ಮ ದೇಶದ ಉನ್ನತ ಭವಿಷ್ಯಕ್ಕಾಗಿ ಇದನ್ನ ಮುಂದುವರಿಸೋಣ, ಆಗಸದೆತ್ತರಕ್ಕೆ ತ್ರಿವರ್ಣಧ್ವಜ ಹಾರಿಸೋಣ. ನಮ್ಮ ದೇಶ ಇನ್ನಷ್ಟು ಬೆಳಗಲಿ, ಉತ್ತುಂಗಕ್ಕೇರಲಿ ಅದಕ್ಕಾಗಿ ನಾವು ಕೈಲಾದಷ್ಟು ಕೆಲಸ ಮಾಡೋಣ ಎಂದು ಸಂಕಲ್ಪ ಮಾಡಿದ್ದಾರೆ. ಇದನ್ನೂ ಓದಿ: ಬಾಬರ್ ಮೇಲಿನ ಗೌರವ ಇಂದಿಗೂ ಬದಲಾಗಿಲ್ಲ – ಪಾಕ್ ಆಟಗಾರನನ್ನ ಬಾಯ್ತುಂಬ ಹೊಗಳಿದ ಕೊಹ್ಲಿ
ಸದ್ಯ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಸಮರಾಭ್ಯಾಸ ನಡೆಸುತ್ತಿದೆ. ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮುನ್ನ ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯುವ ಏಕದಿನ ಏಷ್ಯಾಕಪ್ ಟೂರ್ನಿಯನ್ನೂ ಟೀಂ ಇಂಡಿಯಾ ಎದುರಿಸಬೇಕಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]