ನವದೆಹಲಿ: ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ (Pahalgam) ಭಯೋತ್ಪಾದಕರು ಹಿಂದೂಗಳ ನರಮೇದ ನಡೆಸಿದ ದಿನವೇ ಟೀಂ ಇಂಡಿಯಾ ಮುಖ್ಯಕೋಚ್ ಗೌತಮ್ ಗಂಭೀರ್ (Gautam Gambhi) ಅವರಿಗೆ 2 ಬಾರಿ ಜೀವ ಬೆದರಿಕೆ ಸಂದೇಶ ಬಂದಿತ್ತು ಎಂದು ವರದಿಯಾಗಿದೆ.
2 ಇ-ಮೇಲ್‌ಗಳ ಮೂಲಕ ʻನಿನ್ನನ್ನು ಕೊಲ್ಲುತ್ತೇವೆʼ ಎನ್ನುವ ಬೆದರಿಕೆ ಸಂದೇಶಗಳು ಬಂದಿವೆ. ಈ ಸಂಬಂಧ ಗೌತಮ್ ಗಂಭೀರ್ ಅವರ ಕಾರ್ಯದರ್ಶಿ ದೆಹಲಿ ಪೊಲೀಸರಿಗೆ (Delhi Police) ದೂರು ನೀಡಿದ್ದು, ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇ-ಮೇಲ್ ವಿಳಾಸದ ಬೆನ್ನುಬಿದ್ದಿದ್ದಾರೆ. ಇದನ್ನೂ ಓದಿ: Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ
ಬಿಜೆಪಿ ಮಾಜಿ ಸಂಸದರೂ ಆಗಿರುವ ಗೌತಮ್ ಗಂಭೀರ್ ಅವರಿಗೆ ಇದೇ ಏಪ್ರಿಲ್ 22ರಂದು ಮಧ್ಯಾಹ್ನ 2:07ರ ಸುಮಾರಿಗೆ jigneshsinhsodhaparmar14@gmail.com ಎಂಬ ಇಮೇಲ್ ಐಡಿಯಿಂದ ಮೊದಲ ಇಮೇಲ್ ಬೆದರಿಕೆ ಬಂದಿತ್ತು. ಸಂಜೆ 7:09 ಗಂಟೆ ವೇಳೆಗೆ chandressodha3@gmail.com ಎಂಬ ಐಡಿಯಿಂದ 2ನೇ ಬೆದರಿಕೆ ಸಂದೇಶ ಬಂದಿತ್ತು. ಈ ಹಿನ್ನೆಲೆ ಗಂಭೀರ್ ಅವರಿಗೂ ಸೂಕ್ತ ಭದ್ರತೆ ನೀಡಲಾಗಿದೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ (ಕೇಂದ್ರ) ಹರ್ಷ ವರ್ಧನ್ ಹೇಳಿದ್ದಾರೆ. ಇದನ್ನೂ ಓದಿ: ಕೊಲೆಯಾಗಿದ್ದ ಮಹಿಳೆ ಪತ್ತೆ ಕೇಸ್; 2 ವರ್ಷ ಜೈಲುಶಿಕ್ಷೆ ಅನುಭವಿಸಿ ನಿರಪರಾಧಿಯಾಗಿ ಬಿಡುಗಡೆಯಾದ ಸುರೇಶ್