ಅಹಮದಾಬಾದ್: ಆಸ್ಟ್ರೇಲಿಯಾ (Australia) ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಅಭ್ಯಾಸಕ್ಕಾಗಿ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ತೆರಳುವ ವೇಳೆ ಟೀಂ ಇಂಡಿಯಾ (Team India) ಕ್ರಿಕೆಟಿಗರು ಸಂಭ್ರಮದಿಂದ ಹೋಳಿ ಆಚರಿಸಿದ್ದಾರೆ.
Colours, smiles & more! ???? ☺️
Do not miss #TeamIndia’s Holi celebration in Ahmedabad ???? pic.twitter.com/jOAKsxayBA
— BCCI (@BCCI) March 8, 2023
Advertisement
ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಕ್ರಿಕೆಟಿಗರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಜೊನಾಸೆನ್ ಆಲ್‌ರೌಂಡರ್ ಆಟ, ತಾಲಿಯಾ ಏಕಾಂಗಿ ಹೋರಾಟ – ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಭರ್ಜರಿ ಜಯ
Advertisement
ಈ ಕುರಿತ ವೀಡಿಯೋ ತುಣುಕನ್ನು ಬಿಸಿಸಿಐ (BCCI) ತನ್ನ ಜಾಲತಾಣದಲ್ಲಿ ಹಂಚಿಕೊಂಡಿದೆ. ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ (Virat Kohli) ಮತ್ತು ಇತರರು ಬಣ್ಣ ಹಚ್ಚಿಕೊಂಡು ಜನಪ್ರಿಯ ಇಂಗ್ಲಿಷ್ ಹಾಡು `ಬೇಬಿ ಕಮ್ ಡೌನ್’ ಹಾಡುಗಳನ್ನ ಹಾಡಿ ಕುಣಿದು ಕುಪ್ಪಳಿಸಿದ್ದಾರೆ. ಇದಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೂ ಬಣ್ಣ ಹಚ್ಚಿದ್ದಾರೆ, ಹಿಟ್‌ಮ್ಯಾನ್ ಸಹ ಇಡೀ ತಂಡಕ್ಕೆ ಬಣ್ಣ ಹಚ್ಚಿ ಹೋಳಿ ಶುಭಾಶಯ ಕೋರಿದ್ದಾರೆ.
Advertisement
Advertisement
ಮೈದಾನದಲ್ಲಿ ಬಾಲ್, ಬ್ಯಾಟ್ ಹಿಡಿದು ಅಬ್ಬರಿಸುತ್ತಿದ್ದ ಭಾರತ ತಂಡ ಇಂದು ಬಣ್ಣದಲ್ಲಿ ತೇಲಾಡಿದೆ. ಈ ವೀಡಿಯೋ ಕಂಡು ಟೀಂ ಇಂಡಿಯಾ ಅಭಿಮಾನಿಗಳೂ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ತೊರೆದು ಕೆಲವು ನಾಯಕರು ಬಿಜೆಪಿಗೆ ಬರಲಿದ್ದಾರೆ: ರವಿಕುಮಾರ್
ತನ್ನ ಬೌಲಿಂಗ್, ಬ್ಯಾಟಿಂಗ್ ದಾಳಿಯಿಂದ ಬಾರ್ಡರ್ ಗಾವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಿದ್ದ ಭಾರತ, 3ನೇ ಪಂದ್ಯದಲ್ಲಿ ಸೋತಿತ್ತು. ಇದೀಗ 4ನೇ ಟೆಸ್ಟ್ ಪಂದ್ಯ ನಿರ್ಣಾಯಕವಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ತಂಡ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.