ಪತ್ನಿ ಜೊತೆ ವಿರಾಟ್ ಜಾಲಿ ಟ್ರಿಪ್- ಹಳ್ಳಿಯ ಪುಟ್ಟ ಮನೆಯನ್ನ ಪರಿಚಯಿಸಿದ ವಿರುಷ್ಕಾ

Public TV
2 Min Read
Virat

-ಅದ್ಭುತ ಕ್ಷಣ ಹಂಚಿಕೊಂಡ ಅನುಷ್ಕಾ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಭೂತಾನ್‌ನಲ್ಲಿ ರಜಾದಿನ ಕಳೆಯುತ್ತಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ 31ನೇ ಹುಟ್ಟುಹಬ್ಬವನ್ನು ಮಂಗಳವಾರ ಆಚರಿಸಿಕೊಳ್ಳಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿರಾಟ್ ಹಾಗೂ ಅನುಷ್ಕಾ ದಂಪತಿ ಜಾಲಿ ಟ್ರಿಪ್ ಮೂಡ್‌ನಲ್ಲಿದ್ದಾರೆ. ಅವರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

Anushka sharma

ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳ ಜೊತೆಗೆ ಬಾಲ್ಯದ ನೆನಪುಗಳನ್ನು ಹಾಗೂ ಪರ್ವತಗಳಲ್ಲಿ ಪಾದಯಾತ್ರೆ ಮಾಡುವ ದೃಶ್ಯವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಯಾವುದೇ ಫೋಟೋ ಹಾಗೂ ವಿಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿಲ್ಲ. ಇದನ್ನೂ ಓದಿ: ಕ್ಯಾಚ್ ಡ್ರಾಪ್, ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಸದ ಅನುಭವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಸೋಮಾವರ 8.5 ಕಿ.ಮೀ ಚಾರಣq ಕೈಗೊಂಡಿದ್ದೆವು. ಈ ಸಮಯದಲ್ಲಿ ಪರ್ವತದ ಮೇಲೆ ಒಂದು ಸಣ್ಣ ಹಳ್ಳಿಗೆ ಬಂದು ತಲುಪಿದಾಗ 4 ತಿಂಗಳ ಕರುವನ್ನು ಕಂಡು ಅದಕ್ಕೆ ಆಹಾರ ಹಾಕಲು ನಿಂತಿದ್ವಿ. ಕರುವಿಗೆ ಆಹಾರ ಹಾಕುತ್ತಿದ್ದ ನಮ್ಮನ್ನು ಗಮನಿಸಿದ ಮನೆಯ ಮಾಲೀಕರು ನಾವು ದಣಿದಿದ್ದೇವೆ ಎಂದು ತಿಳಿದು, ಒಂದು ಕಪ್ ಚಹಾವನ್ನು ಬಯಸುತ್ತೀರಾ ಎಂದು ಕೇಳಿದರು. ಆದ್ದರಿಂದ ನಾವು ಈ ಸುಂದರ ಮತ್ತು ಬೆಚ್ಚಗಿನ ಕುಟುಂಬದ ಮನೆಗೆ ಹೋದೆವು. ನಾವು ಯಾರೆಂದು ಮನೆಯಲ್ಲಿದ್ದವರು ಸಂಪೂರ್ಣವಾಗಿ ತಿಳಿದಿರಲಿಲ್ಲ. ಆದರೂ ನಮ್ಮನ್ನು ಪ್ರೀತಿಯಿಂದ ಕಂಡರು ಎಂದು ಬರೆದುಕೊಂಡಿದ್ದಾರೆ.

https://www.instagram.com/p/B4c2AK4J0lV/

2018ರ ಅಕ್ಟೋಬರ್ ನಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಇಲ್ಲದೇ ಆಡಿದ್ದರು. ಟೀಂ ಇಂಡಿಯಾ ಆಡಿರುವ 56 ಪಂದ್ಯಗಳಲ್ಲಿ 48 ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಇಂದೋರ್ ನಲ್ಲಿ ನವೆಂಬರ್ 14ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ.

https://www.instagram.com/p/B4UguwypnOX/

Share This Article
Leave a Comment

Leave a Reply

Your email address will not be published. Required fields are marked *