ಅಹಮದಾಬಾದ್: ಸಿಕ್ಸರ್, ಬೌಂಡರಿ ಸಿಡಿಸಿ ವಿಶ್ವಕಪ್ ಕ್ರಿಕೆಟ್ (World Cup Cricket) ಟೂರ್ನಿಯಲ್ಲಿ ಅಭಿಮಾನಿಗಳನ್ನು ರಂಜಿಸಿದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ವಿಶ್ವ ದಾಖಲೆ (World Record) ಬರೆದಿದ್ದಾರೆ.
ಹೌದು. ಈ ಟೂರ್ನಿಯ 11 ಪಂದ್ಯಗಳಿಂದ 597 ರನ್ ಸಿಡಿಸಿ ಇತಿಹಾಸ ಸೃಷ್ಟಿದ್ದಾರೆ. ಈ ಮೂಲಕ ತಂಡ ಒಂದರ ನಾಯಕನಾಗಿ ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟರ್ ಆಗಿ ರೋಹಿತ್ ಹೊರಹೊಮ್ಮಿದ್ದಾರೆ.
Advertisement
Advertisement
Advertisement
Advertisement
ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 578 ರನ್, 2007ರಲ್ಲಿ ಶ್ರೀಲಂಕಾದ ಜಯವರ್ಧನೆ 548 ರನ್, 2007 ರಲ್ಲಿ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್ 539 ರನ್, 2019 ರಲ್ಲಿ ಆಸ್ಟ್ರೇಲಿಯಾದ ಆರನ್ ಫಿಂಚ್ 507 ರನ್ ಹೊಡೆದಿದ್ದರು. ಇದನ್ನೂ ಓದಿ: ಮೂರು ಫೈನಲ್ ಪೈಕಿ ಟಾಸ್ ಸೋತ ಎರಡರಲ್ಲಿ ಭಾರತ ಚಾಂಪಿಯನ್ – ಈ ಬಾರಿ ಏನಾಗಬಹುದು?
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಫೈನಲ್‌ನಲ್ಲಿ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್( 3 ಸಿಕ್ಸರ್, 4 ಬೌಂಡರಿ) ಸಿಡಿಸಿ ಔಟಾದರು. ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. 7ನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ ಫೈನಲ್ ಪಂದ್ಯವನ್ನು ಹೊರತುಪಡಿಸಿ 10 ಪಂದ್ಯಗಳಿಂದ 528 ರನ್ ಹೊಡೆದಿದ್ದಾರೆ.
ನಾನು ದಾಖಲೆಗಾಗಿ ಆಡುವುದಿಲ್ಲ. ನಾನು ಬ್ಯಾಟ್ ಮಾಡಲು ಬರುವಾಗ ತಂಡದ ಸ್ಕೋರ್ ಸೊನ್ನೆ ಆಗಿರುತ್ತದೆ. ಆರಂಭಿಕ ಆಟಗಾರನಾಗಿರುವ ಕಾರಣ ನನಗೆ ತಂಡದ ಖಾತೆಯನ್ನು ತೆರೆಯಲು ಅವಕಾಶ ಸಿಗುತ್ತದೆ. ನಾನು ವೇಗವಾಗಿ ರನ್ ಗಳಿಸಿದಷ್ಟು ನಂತರ ಬರುವ ಆಟಗಾರರಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದರು.
125.94 ಸ್ಟ್ರೇಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 1 ಶತಕ, 3 ಅರ್ಧಶತಕ, 66 ಬೌಂಡರಿ, 31 ಸಿಕ್ಸರ್ ಸಿಡಿಸಿದ್ದಾರೆ.