ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಸಚಿನ್ ಎರಡು ಎಕದಿನ, ಟೆಸ್ಟ್ ಎರಡೂ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅವರು 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಮತ್ತು 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.
ಸಚಿನ್ ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಉತ್ತಮ ಸರಾಸರಿಯನ್ನು ಹೊಂದಿರುವ ಭಾರತೀಯ ಬ್ಯಾಟ್ಸ್‌ಮನ್ ದಾಖಲೆಯನ್ನು ತಪ್ಪಿಸಿಕೊಂಡರು. ಈ ಪಟ್ಟಿಯಲ್ಲಿ ಅವರ ಬಾಲ್ಯದ ಸ್ನೇಹಿತ ವಿನೋದ್ ಕಾಂಬ್ಳಿ ಅಗ್ರಸ್ಥಾನದಲ್ಲಿದ್ದಾರೆ.
Advertisement
Advertisement
ಹೌದು, ವಿನೋದ್ ಕಾಂಬ್ಳಿ ಅವರ ಹೆಸರು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಆದರೆ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಭಾರತೀಯರ ಪಟ್ಟಿಯಲ್ಲಿ ವಿನೋದ್ ಕಾಂಬ್ಳಿ ನಂಬರ್ 1 ಸ್ಥಾನದಲ್ಲಿದ್ದಾರೆ. ಅವರು ಕೇವಲ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಸಚಿನ್ ಅವರಿಗಿಂತ ಭಿನ್ನವಾಗಿ, ಕಾಂಬ್ಳಿ ಪ್ರಾರಂಭದಲ್ಲಿಯೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ತಮ್ಮ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಡಬಲ್-ಶತಕ ಸಿಡಿಸಿದ್ದರು. ಬಳಿಕ ಮುಂದಿನ ಎರಡು ಟೆಸ್ಟ್ ಗಳಲ್ಲಿ ಇನ್ನೂ ಎರಡು ಶತಕಗಳನ್ನು ಗಳಿಸಿದ್ದರು.
Advertisement
Advertisement
ಕಾಂಬ್ಳಿ ಅವರು ಆಡಿದ ನಂತರದ 13 ಇನ್ನಿಂಗ್ಸ್‌ಗಳಲ್ಲಿ ಮೂರು ಅಂಕಿ ರನ್ ಗಳಿಸಲು ಹೆಣಗಾಡಿದರು. 1995ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಮೂಲಕ ಕಾಂಬ್ಳಿ ತಮ್ಮ ವೃತ್ತಿ ಜೀವನದ ಟೆಸ್ಟ್ ಕ್ರಿಕೆಟ್‍ನಲ್ಲಿ 54.20ರ ಸರಾಸರಿಯಲ್ಲಿ ಒಟ್ಟು 1,084 ರನ್ ಗಳಿಸಿದರು. 2000ದಲ್ಲಿ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಆದರೆ 1995ರ ನಂತರ ಎಂದಿಗೂ ಟೆಸ್ಟ್ ತಂಡಕ್ಕೆ ಕಮ್‍ಬ್ಯಾಕ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.
ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸರಾಸರಿ ಹೊಂದಿದ ಬ್ಯಾಟ್ಸ್‌ಮನ್‍ಗಳ ಪಟ್ಟಿಯಲ್ಲಿ ಕಾಂಬ್ಳಿ ನಂತರದ ಸ್ಥಾನದಲ್ಲಿ ಬಾಲ್ಯದ ಸ್ನೇಹಿತ ಸಚಿನ್ ಇದ್ದಾರೆ. ಮಾಸ್ಟರ್ ಬ್ಲಾಸ್ಟರ್ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 52.62 ಸರಾಸರಿಯಲ್ಲಿ 7,240 ರನ್ ದಾಖಲಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ 52.63 ಸರಾಸರಿಯಲ್ಲಿ 13,265 ರನ್ ಗಳಿಸಿದರೆ, ಸುನಿಲ್ ಗವಾಸ್ಕರ್ 51.12 ಸರಾಸರಿಯಲ್ಲಿ 10,122 ರನ್ ದಾಖಲಿಸಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.