ಭೋಪಾಲ್: 11ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು 1000 ರೂ. ಹಣ ಕಳ್ಳತನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕಿಯರೇ ಅವರ ಬಟ್ಟೆ ಬಿಚ್ಚಿಸಿರುವ ಆರೋಪ ಕೇಳಿಬಂದಿದೆ.
ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯ ಜೋಬಾತ್‍ನಲ್ಲಿ ಜನವರಿ 8 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ವಿದ್ಯಾರ್ಥಿನಿಯರು ಜೋಬಾತ್ ಪೊಲೀಸ್ ಠಾಣೆಗೆ ಬುಧವಾರದಂದು ದೂರು ನೀಡಿದ್ದಾರೆ.
Advertisement
ತನ್ನ ಬಳಿ ಇದ್ದ 1000 ರೂಪಾಯಿ ಕಳವು ಮಾಡಿದ್ದಾರೆಂದು 11 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಅವರ ಸಹಪಾಠಿಯಿಂದಲೇ ಆರೋಪ ಮಾಡಲಾಗಿತ್ತು. ಹೀಗಾಗಿ ಹಣವನ್ನು ಪತ್ತೆ ಮಾಡುವ ಭರದಲ್ಲಿ ಶಿಕ್ಷಕಿಯರು ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರ ಬಳಿ ಯಾವುದೇ ಹಣ ಸಿಕ್ಕಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಶಂಕರ್ ಸಿಂಗ್ ಜಮ್ರಾ ತಿಳಿಸಿದ್ದಾರೆ.
Advertisement
Advertisement
ವಿದ್ಯಾರ್ಥಿನಿಯರು ಹಣ ಕದ್ದಿದ್ದೀರಾ ಎಂದು ಶಿಕ್ಷಕಿಯರು ಮೊದಲು ತರಗತಿಯಲ್ಲೇ ಇಬ್ಬರನ್ನೂ ಪ್ರಶ್ನೆ ಮಾಡಿದ್ದಾರೆ. ಅವರ ಸ್ಕೂಲ್ ಬ್ಯಾಗ್ ಶೋಧಿಸಿದ್ದಾರೆ. ನಂತರ ಶಾಲೆಯ ಇನ್ನೊಂದು ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ, ಹಣಕ್ಕಾಗಿ ಹುಡುಕಾಡಿದ್ದಾರೆ ಎಂದು ಆರೋಪಿಸಲಾಗಿದೆ.
Advertisement
ಶಾಲೆಯ ಮುಖ್ಯೋಪಾಧ್ಯಾಯರು ಈ ಆರೋಪವನ್ನ ತಳ್ಳಿಹಾಕಿದ್ದಾರೆ. ಶಾಲೆಯಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 1000 ರೂ. ಕದ್ದರೆಂದು ಸಾಮಾನ್ಯವಾಗಿ ಚೆಕ್ ಮಾಡಲಾಗಿದೆ. ಆದ್ರೆ ಬಟ್ಟೆ ಬಿಚ್ಚಿಸಿದ್ರು ಅನ್ನೋ ಆರೋಪ ಆಧಾರರಹಿತ ಎಂದು ಹೇಳಿದ್ದಾರೆ.
ಈ ಬಗ್ಗೆ ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುತ್ತಿದೆ. ತನಿಖೆಯ ನಂತರ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಜಮ್ರಾ ತಿಳಿಸಿದ್ದಾರೆ.