ಮಂಗಳೂರು: ರಕ್ಷಾಬಂಧನ ಧರಿಸಿ ಶಾಲೆಗೆ ಬಂದ ಮಕ್ಕಳ ಕೈಯಿಂದ ರಕ್ಷಾ ಬಂಧನ ತೆಗಿಸಿ ಶಾಲಾ ಶಿಕ್ಷಕಿಯೊಬ್ಬರು ವಿವಾದಕ್ಕೀಡಾಗಿದ್ದಾರೆ.
Advertisement
ಮಂಗಳೂರು ನಗರ ಹೊರವಲಯದ ಕಾಟಿಪಳ್ಳದ ಇನ್ ಫ್ಯಾಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಿಕ್ಷಕಿ ಮಕ್ಕಳ ಕೈಯಿಂದ ರಕ್ಷಾ ಬಂಧನ ತೆಗೆಸಿದ್ದಾರೆ. ಇದನ್ನು ಖಂಡಿಸಿ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಇತ್ತ ಆಡಳಿತ ಮಂಡಳಿ ಪ್ರತಿಕ್ರಿಯಿಸಿ, ಶಿಕ್ಷಕಿಯೊಬ್ಬರ ಬೇಜವಾಬ್ದಾರಿಯಿಂದ ಆದ ಘಟನೆ ಎಂದು ಹೇಳಿದೆ. ಪೋಷಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅಧ್ಯಾಪಕರು ಪೋಷಕರ ಬಳಿ ಕ್ಷಮೆ ಕೋರಿದ್ದಾರೆ.
Advertisement
Advertisement
ನಿನ್ನೆ ವಿದ್ಯಾರ್ಥಿಗಳ ಕೈಯಿಂದ ಅಧ್ಯಾಪಕರು ರಕ್ಷಾಬಂಧನ ತೆಗೆಸಿದ್ದರು. ಇಂದು ಫೋಷಕರ ಆಕ್ರೋಶ ಹಿನ್ನೆಲೆಯಲ್ಲಿ ಕ್ಷಮೆ ಕೋರಿದ್ದಾರೆ. ಅಲ್ಲದೆ ಇದೇ ವೇಳೆ ಪೋಷಕರು ಶಾಲೆಯ ಫಾದರ್ ಕೈಗೆ ರಕ್ಷಾ ಬಂಧನ ಕಟ್ಟಿದರು. ಕೊನೆಗೆ ಸುರತ್ಕಲ್ ಪೊಲೀಸರ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿತ್ತು. ಇದನ್ನೂ ಓದಿ: ಪಂಚಾಯತ್ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ, ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ: ಸರ್ವೇಯಿಂದ ತಾರತಮ್ಯ ಬೆಳಕಿಗೆ