ರಾಯಚೂರು: ತಾಲೂಕಿನ ಲಿಂಗನಖಾನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ (Government School) ದಿಢೀರ್ ಭೇಟಿ ನೀಡಿದ ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತ (Assistant Commissioner) ರಜನಿಕಾಂತ್ ಚವ್ಹಾಣ್ ಅಲ್ಲಿನ ಪರಿಸ್ಥಿತಿ ಕಂಡು ಶಾಕ್ ಆಗಿದ್ದಾರೆ.
ಎರಡನೇ ತರಗತಿ ಮಕ್ಕಳಿಗೆ ಇಂಗ್ಲಿಷ್ (English) ವರ್ಣಮಾಲೆ ಪರಿಚಯವೇ ಇಲ್ಲದ್ದನ್ನು ತಿಳಿದು ದಿಢೀರ್ ಭೇಟಿ ವೇಳೆ ಎಸಿ ಗರಂ ಆಗಿದ್ದಾರೆ. ಮಕ್ಕಳಿಗೆ ಎಬಿಸಿಡಿ ಓದಲು ಬರುವುದಿಲ್ಲ ಏನ್ ಕಲಿಸುತ್ತಿದ್ದಿರಿ ಎಂದು ಶಿಕ್ಷಕಿ (Teacher) ಹಾಗೂ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆಗಳನ್ನೇ ಹೇಳುತ್ತಿರುವುದನ್ನು ಬಿಟ್ಟು ಮಕ್ಕಳಿಗೆ ಕಲಿಸುವ ಕಡೆಯೂ ಗಮನಹರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು
ಕೋವಿಡ್ (Covid-19) ಕಾರಣಕ್ಕೆ ಎರಡು ವರ್ಷದಿಂದ ಮಕ್ಕಳು ಓದಿನಲ್ಲಿ ಹಿಂದೆ ಬಿದ್ದಿದ್ದಾರೆ ಅನ್ನೋ ಶಿಕ್ಷಕಿಯ ಸಮಜಾಯಿಷಿಗೆ ಅಧಿಕಾರಿ ಗರಂ ಆದರು. ನಾನೇ ಶಿಕ್ಷಕನಾಗಿ ಬರಲೇ ಎರಡೇ ದಿನದಲ್ಲಿ ಎಬಿಸಿಡಿ ಕಲಿಸುತ್ತೇನೆ. ಒಂದು ವಾರದೊಳಗೆ ಮಕ್ಕಳಿಗೆ ಎಬಿಸಿಡಿ ಕಲಿಸಬೇಕು. ಮಕ್ಕಳು ಪಟಪಟನೆ ಎಬಿಸಿಡಿ ಹೇಳುವುದನ್ನು ವೀಡಿಯೋ ಮಾಡಿ ಕಳುಹಿಸಿ ಎಂದು ತಾಕೀತು ಮಾಡಿದರು. ಶಾಲೆಯ ಶಿಕ್ಷಕರ ಕೊರತೆ ಬಗ್ಗೆ ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆಮಾಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಎಸಿ ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್ ಆಪರೇಷನ್
Live Tv
[brid partner=56869869 player=32851 video=960834 autoplay=true]