ಕೊಪ್ಪಳ: ವಿದ್ಯುತ್ ಅವಘಡದಿಂದ (Electrocute) ಶಿಕ್ಷಕಿಯೊಬ್ಬರು ಸಾವಿಗೀಡಾದ ಘಟನೆ ಗಂಗಾವತಿಯ (Gangavati) ಜಂಗಮರ ಕಲ್ಗುಡಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಹರಿತಾ (34) ಎಂದು ಗುರುತಿಸಲಾಗಿದೆ. ಇಂದು (ಏ.3) ಬೆಳಗ್ಗೆ ಶಾಲೆಗೆ (School) ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಹೋಗುವಾಗ ತುಂಡಾಗಿದ್ದ ವಿದ್ಯುತ್ ತಂತಿ ಗಮನಿಸದೇ ತುಳಿದಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬುರ್ಖಾಧಾರಿ ಮಹಿಳೆಯರು!
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಬಿಹಾರದ ಯುವತಿ ಮೇಲೆ ರೇಪ್ – ಅಣ್ಣನಿಗೆ ಥಳಿಸಿ ತಂಗಿಯನ್ನು ಎಳೆದೊಯ್ದು ಅತ್ಯಾಚಾರ