– ಜಿಲ್ಲಾಡಳಿತ, ತಾಲೂಕಾಡಳಿತದಿಂದ ಸನ್ಮಾನ
ರಾಯಚೂರು: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸರ್ವರ್ (Caste Census Survey) ಸೇರಿ ನಾನಾ ಸಮಸ್ಯೆಗಳಿಂದ ಗಣತಿದಾರರು ಪರದಾಡುತ್ತಿದ್ದಾರೆ. ಇದೆಲ್ಲದರ ನಡುವೆ ರಾಯಚೂರಿನ (Raichuru) ಶಿಕ್ಷಕರೊಬ್ಬರು ಮೂರೇ ದಿನದಲ್ಲಿ ಜಾತಿಗಣತಿ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯ ಕಟ್ಲಾಟಕೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ಅವರು ಕಳೆದ ಮೂರು ದಿನಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಗಿಸಿದ್ದಾರೆ. ಶಿಕ್ಷಕನ ಕಾರ್ಯ ಮೆಚ್ಚಿ ರಾಯಚೂರು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದೆ.ಇದನ್ನೂ ಓದಿ: ಕಾಲ್ತುಳಿತಕ್ಕೆ ಪೊಲೀಸರು ಹೊಣೆ – ಪತ್ರ ಬರೆದು ವಿಜಯ್ ಅಭಿಮಾನಿ, ಟಿವಿಕೆ ಕಾರ್ಯಕರ್ತ ಆತ್ಮಹತ್ಯೆ
ಸೆ.22ರಿಂದ 26ರವರೆಗೆ ಸರ್ವರ್ ಸಮಸ್ಯೆಯಿಂದ ಕಷ್ಟಪಟ್ಟಿದ್ದರು. ನೆಟ್ವರ್ಕ್, ಸರ್ವರ್ ಸಮಸ್ಯೆಗಳ ನಡುವೆ ಸಹಾಯವಾಣಿಗೆ ನಿರಂತರ ಸಂಪರ್ಕಿಸಿ, ಬಳಿಕ ನಿಗದಿ ಮಾಡಿದ್ದ ಬ್ಲಾಕ್‌ನ 86 ಮನೆಗಳ ಸಮೀಕ್ಷೆಯನ್ನು ಮೂರೇ ದಿನಗಳಲ್ಲಿ ಮುಗಿಸಿದ್ದಾರೆ. ಜೊತೆಗೆ ಮನೆಯಲ್ಲಿ ಇಲ್ಲದವರನ್ನ ಪುನಃ ಸಂಪರ್ಕಿಸಿ ಸಮೀಕ್ಷೆ ಪೂರ್ಣ ಮಾಡಿದ್ದಾರೆ. ಅದಲ್ಲದೇ ಗೂಗಲ್ ಮ್ಯಾಪ್ ಸಮಸ್ಯೆ ನಡುವೆ ಬ್ಲಾಕ್ ಐಡಿ ಆಧಾರದ ಮೇಲೆ ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.