ಶ್ರೀನಗರ: ಮನೆಯಲ್ಲಿ ಪೂಜೆ ಮುಗಿಸಿ ತಿಲಕವಿಟ್ಟುಕೊಂಡು ಶಾಲೆಗೆ ತೆರಳಿದ ಹಿಂದೂ ವಿದ್ಯಾರ್ಥಿನಿಗೆ ಮುಸ್ಲಿಂ ಶಿಕ್ಷಕರೊಬ್ಬರು ಥಳಿಸಿದ ಘಟನೆ ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ನಡೆದಿದೆ.
Advertisement
ಹಿಂದೂಗಳ ಪವಿತ್ರ ಚೈತ್ರ ನವರಾತ್ರಿ ಹಬ್ಬ ನಡೆಯುತ್ತಿದೆ. ಹೀಗಾಗಿ ಜಮ್ಮು-ಕಾಶ್ಮೀರದ ಹಿಂದೂಗಳ ಮನೆಯಲ್ಲಿ ಪ್ರತಿದಿನ ಪೂಜೆ ನಡೆಯುತ್ತದೆ. ಮನೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡ ಮಗಳು ಹಣೆಗೆ ತಿಲಕವನ್ನಿಟ್ಟು ಶಾಲೆಗೆ ಹೋಗಿದ್ದಳು. ಹಣೆಗೆ ತಿಲಕ ಇಟ್ಟು ಬಂದಿದ್ದಕ್ಕೆ ಶಿಕ್ಷಕ ನಿಸಾರ್ ಅಹ್ಮದ್ ಹೊಡೆದಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಉಗ್ರರನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ದಾಳಿ: ಉನ್ನತ ಅಧಿಕಾರಿ
Advertisement
Advertisement
ಈ ಬಗ್ಗೆ ಪಾಲಕರು ದೂರು ನೀಡುತ್ತಿದ್ದಂತೆ ರಾಜೌರಿ ಜಿಲ್ಲೆಯ ಹೆಚ್ಚುವರಿ ಡೆಪ್ಯೂಟಿ ಕಮಿಷನರ್ ಶಿಕ್ಷಕನನ್ನು ಅಮಾನತು ಮಾಡಿದ್ದಾರೆ. ಘಟನೆ ಕುರಿತಾಗಿ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳಂತೆ ಮುಸಲ್ಮಾನರೂ ಪೌರಕಾರ್ಮಿಕರಾಗಿ ದುಡಿಯಲಿ: ಸೊಗಡು ಶಿವಣ್ಣ
Advertisement
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಕಿಯ ತಂದೆ, ಈ ರೀತಿಯ ಘಟನೆಗಳು ಸಮಾಜಕ್ಕೆ ಮಾರಕ. ಸಾಮಾನ್ಯ ಜನರೂ ಕೂಡ ಧರ್ಮದ ವಿಚಾರಕ್ಕೆ ಕಿತ್ತಾಡುವಂತೆ ಮಾಡಬಾರದು. ಧರ್ಮದ ಹೆಸರಿನಲ್ಲಿ ಹೀಗೆಲ್ಲ ಮಾಡುತ್ತ ಹೋದರೆ, ಮುಂದೊಂದು ದಿನ ಪರಸ್ಪರರ ಕುತ್ತಿಗೆ ಕತ್ತರಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.