ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು

Public TV
2 Min Read
Tea

ಡಿಸ್ಪುರ್: ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಹೀಗಿರುವಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಶೌರ್ಯ ಮತ್ತು ಧೈರ್ಯವನ್ನು ಗೌರವಿಸಲು ಅಸ್ಸಾಂ ಮೂಲದ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಹೆಸರಿಡಲಾಗಿದೆ.

ಭಾರತದ ಅಸ್ಸಾಂನ ಸ್ಟಾರ್ಟ್-ಅಪ್ ಕಂಪನಿಯೊಂದು ಉಕ್ರೇನ್ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊಸ ಚಹಾ ಪುಡಿಗೆ ಅಧ್ಯಕ್ಷ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ. ದೇಶಕ್ಕಾಗಿ ಹೋರಾಡುತ್ತಿರುವ ಉಕ್ರೇನ್ ಅಧ್ಯಕ್ಷರನ್ನು ತಮ್ಮದೇ ಆದ ರೀತಿಯಲ್ಲಿ ಗೌರವಿಸಲು ಈ ಸ್ಟಾರ್ಟಪ್ ನಿರ್ಧರಿಸಿದ್ದು, ಅವರ ಹೆಸರನ್ನು ಅವರ ಹೊಸ ಚಹಾಕ್ಕೆ ಇಟ್ಟಿದೆ. ಅಧ್ಯಕ್ಷರ ಶೌರ್ಯಕ್ಕೆ ಗೌರವವಾಗಿ ತನ್ನ ಚಹಾವನ್ನು ಝೆಲೆನ್ಸ್ಕಿ ಎಂದು ಹೆಸರಿಸಲು ಸ್ಟಾರ್ಟ್-ಅಪ್ ನಿರ್ಧರಿಸಿದೆ.

black tea

ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸುಗಂಧ ಚಹಾದ ನಿರ್ದೇಶಕ ರಂಜಿತ್ ಬರುವಾ, ‘ಝೆಲೆನ್ಸ್ಕಿ’ ಬ್ರ್ಯಾಂಡ್, ಪ್ರಬಲ ಅಸ್ಸಾಂ ಚಹಾವನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಝೆಲೆನ್ಸ್ಕಿ ಬ್ರ್ಯಾಂಡ್ ಚಹಾದ ಚಿತ್ರವನ್ನು ಟೀ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಅಧಿಕಾರಿ ಜೋಯ್ದೀಪ್ ಫುಕನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Tea Named After Ukraine Zelensky By Assam 1

ಯುದ್ಧ ಪೀಡಿತ ಉಕ್ರೇನ್‍ನಿಂದ ಪಾರಾಗುವ ಯುಎಸ್ ಪ್ರಸ್ತಾಪವನ್ನು ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷರ ಶೌರ್ಯ ಮತ್ತು ಧೈರ್ಯವನ್ನು ಗೌರವಿಸುವುದು ನಮ್ಮ ಮೂಲ ಆಲೋಚನೆಯಾಗಿದೆ. ಝೆಲೆನ್ಸ್ಕಿ ಅವರು ಯುದ್ಧ ಭೂಮಿ ತೊರೆಯದೇ ಕೊನೆಯ ಸೈನಿಕ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಇದು ಅವರ ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಸುಗಂಧ ಚಹಾದ ನಿರ್ದೇಶಕ ರಂಜಿತ್ ಬರುವಾ ತಿಳಿಸಿದರು. ಆರೊಮ್ಯಾಟಿಕ್ ಟೀ ಕಂಪನಿಯ ಝೆಲೆನ್ಸ್ಕಿ ಬ್ರಾಂಡ್ ಚಹಾವು ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್‍ಡಿಕೆ

ರಷ್ಯಾದ ಆಕ್ರಮಣದ ವಿರುದ್ಧ ಕೊನೆಯ ಸೈನಿಕರು ಇರುವವರೆಗೆ ಹೋರಾಡಲು ಪ್ರತಿಜ್ಞೆ ಮಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅನೇಕರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಅವರ ದೇಶವನ್ನು ಉಳಿಸಲು ಮಾಡುವ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್‌ ಬೆಂಬಲಿಸಿದ ಹೆಚ್‌ಡಿಕೆ

Share This Article
Leave a Comment

Leave a Reply

Your email address will not be published. Required fields are marked *