ಹಿಟ್ಲರ್ ವೇಷದಲ್ಲಿ ಕಾಣಿಸಿಕೊಂಡ ಸಂಸದ!

Public TV
1 Min Read
TDPs Sivaprasad

ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಮೀಸಲಾತಿ ನೀಡುವಂತೆ ಒತ್ತಾಯಿಸಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದ ನರಮಳ್ಳಿ ಶಿವಪ್ರಸಾದ್ ವಿಭಿನ್ನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

ಗುರುವಾರ ಕಲಾಪಕ್ಕೆ ಹಿಟ್ಲರ್ ವೇಷದಲ್ಲಿಯೇ ಶಿವಪ್ರಸಾದ್ ಬಂದಿದ್ದು, ದಿಟ್ಟ ಅಡಾಲ್ಫ್ ಹಿಟ್ಲರ್ ನಂತೆ ಕಂಡರು. ಈ ಹಿಂದೆಯೂ ಅವರು ಅನೇಕ ಪ್ರತಿಭಟನೆ ವೇಳೆ ಕೃಷ್ಣ, ಬಿ.ಆರ್.ಅಂಬೇಡ್ಕರ್, ಶಾಲಾ ವಿದ್ಯಾರ್ಥಿ, ಜಾನಪದ ಕಲಾವಿದ, ಪುಟ್ಟಪರ್ತಿ ಸಾಯಿ ಬಾಬಾ ಹಾಗೂ ಮಹಿಳೆಯ ವೇಷ ತೊಟ್ಟು ಕೇಂದ್ರ ಸರ್ಕಾರದ ವಿರುದ್ಧ ಅಣುಕು ಪ್ರತಿಭಟನೆ ಮಾಡಿದ್ದರು.

Naramalli Shivaprasad Krishna

ಹಿಟ್ಲರ್ ವೇಷದಲ್ಲಿ ಕಾಣಿಸಿಕೊಂಡು, ಸಂಸತ್ ಭವನದ ಮುಂದೆ ಟಿಡಿಪಿ ಪಕ್ಷದ ಉಳಿದ ಸಂಸದರ ಜೊತೆಗೂಡಿ ಪ್ರತಿಭಟನೆ ನಡೆಸಿದ್ದಾರೆ. ಎನ್‍ಡಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಂಧ್ರ ಪ್ರದೇಶಕ್ಕೆ ವಿಶೇಷ ಮೀಸಲಾತಿ ಸಂಬಂಧ ಅನುಧಾನ ನೀಡಬೇಕು ಎಂದು ಒತ್ತಾಯಿಸಿದರು.

ಆಂಧ್ರ ಪ್ರದೇಶದ ಚಿತ್ತೂರು ಲೋಕಸಭಾ ಕ್ಷೇತ್ರದ ಸಂಸದ ಶಿವಪ್ರಸಾದ್ ಇತ್ತೀಚೆಗಷ್ಟೇ ಎನ್‍ಡಿಎ ಒಕ್ಕೂಟದಿಂದ ಹೊರಬಂದ ಟಿಡಿಪಿಯ ಸದಸ್ಯರಾಗಿದ್ದಾರೆ. ಅವೈಜ್ಞಾನಿಕ ರಾಜ್ಯ ವಿಭಜನೆಯಿಂದ ಆಗಿರುವ ನಷ್ಟ ಪರಿಹರಿಸಲು ಕೇಂದ್ರ ಸರ್ಕಾರ ಕೈ ಜೋಡಿಸಬಹುದು ಎನ್ನುವ ಕಾರಣಕ್ಕೆ ನಾವು ಬೆಂಬಲ ನೀಡಿದ್ದೇವು. ಆದರೆ ಬಿಜೆಪಿಯಿಂದ ನಮಗೆ ಅನ್ಯಾಯವಾಗಿದೆ ಎಂದು ಶಿವಪ್ರಸಾದ್ ದೂರಿದರು.

Naramalli Shivaprasad student

ಸಂಸದ ಶಿವಪ್ರಸಾದ್ ಟಾಲಿವುಡ್ ನಟನಾಗಿದ್ದು, 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2005 ರಲ್ಲಿ ಬಿಡುಗಡೆಯಾದ ಡೆಂಜರ್ ಸಿನಿಮಾದಲ್ಲಿ ಕುತಂತ್ರ ರಾಜಕಾರಣಿ ಪಾತ್ರ ನಿರ್ವಹಿಸಿ ಅತ್ಯುತ್ತಮ ಖಳ ನಟ ವಿಭಾಗದ ನಂದಿ ಪ್ರಶಸ್ತಿ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *