ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು (Chandrababu Naidu) ಅವರು ಇದೇ ಜೂ.12 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಕುರಿತು ಆಂಧ್ರ (Andhra Pradesh) ಸಿಎಂ ಅಧಿಕೃತ ಖಾತೆಯು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ. ಜೂ.12 ರಂದು ಬೆಳಗ್ಗೆ 11:27 ಕ್ಕೆ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೃಷ್ಣಾ ಜಿಲ್ಲೆಯ ಗನ್ನವರಂನ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇದನ್ನೂ ಓದಿ: ಕಾಂಗ್ರೆಸ್‍ನ ಸಂಸದೀಯ ಪಕ್ಷದ ನಾಯಾಕಿಯಾಗಿ ಸೋನಿಯಾ ಗಾಂಧಿ ಮರು ಆಯ್ಕೆ
“Swearing – In ceremony will be held @ 11:27 AM
on 12th June, 2024 near Kesarapalli IT Park, Gannavaram, Krishna District.”
— CMO Andhra Pradesh (@AndhraPradeshCM) June 8, 2024
ಆಂಧ್ರಪ್ರದೇಶದಲ್ಲಿ ನಡೆದ 2024ರ ವಿಧಾನಸಭಾ ಚುನಾವಣೆಯಲ್ಲಿ ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವು 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಸಾಧನೆ ಮಾಡಿತು.
ಜನಸೇನಾ ಪಕ್ಷ 21, ಆಡಳಿತಾರೂಢ ಪಕ್ಷ ವೈಎಸ್‌ಆರ್‌ಸಿಪಿ ಕೇವಲ 11 ಹಾಗೂ ಬಿಜೆಪಿ 8 ಸ್ಥಾನಗಳನ್ನು ಗೆದ್ದಿದೆ. ಇದನ್ನೂ ಓದಿ: ಮೋದಿ ಸಂಪುಟದಲ್ಲಿ ಹೆಚ್‍ಡಿಕೆಗೆ ಸಚಿವ ಸ್ಥಾನ ಫಿಕ್ಸ್?