ಬೆಂಗಳೂರು: ನಗರದಲ್ಲಿ ಖಾಸಗಿ ಬಸ್ (Private Bus) ಆಟಾಟೋಪ ಹೆಚ್ಚಾಗಿದೆ. ಸಾರಿಗೆ ಇಲಾಖೆಗೆ ಲಕ್ಷ ಲಕ್ಷ ಟ್ಯಾಕ್ಸ್ ವಂಚನೆ (ax Evasion) ಮಾಡಿದ ಖಾಸಗಿ ವಾಹನಗಳ ಮಾಲೀಕರು ಸರ್ಕಾರಕ್ಕೆ ಯಾಮಾರಿಸ್ತಿದ್ರು. ಇದೀಗ ಸಾರಿಗೆ ಇಲಾಖೆ ವಾಹನಗಳನ್ನು ಸೀಜ್ ಮಾಡ್ತಿದೆ.
ನಗರದಲ್ಲಿ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಟ್ಯಾಕ್ಸ್ ಕಟ್ಟುತ್ತಿಲ್ಲ. ಇದರಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗ್ತಿದೆ. ಇದೀಗ ಸಾರಿಗೆ ಇಲಾಖೆ ಅಪರ ಆಯುಕ್ತ ಎಂ.ಪಿ ಓಂಕಾರೇಶ್ವರಿ ನೇತೃತ್ವದ ತಂಡ ಫೀಲ್ಟ್‌ಗೆ ಇಳಿದಿದೆ. ತೆರಿಗೆ ವಂಚಕರ ವಿರುದ್ಧ ಸಮರ ಸಾರಿದೆ. ಟ್ಯಾಕ್ಸ್ ವಂಚನೆ ಮಾಡಿದವ್ರನ್ನ ಪತ್ತೆ ಹಚ್ಚಿ ನೂರಾರು ಬಸ್‌ಗಳನ್ನ ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ
ಕಳೆದ 5-6 ತಿಂಗಳಲ್ಲಿ 2 ಕೋಟಿಯಷ್ಟು ಟ್ಯಾಕ್ಸ್ ಹಣವನ್ನ ವಸೂಲಿ ಮಾಡಲಾಗಿದೆ. ಸುಮಾರು ದಿನಗಳಿಂದ ಟ್ಯಾಕ್ಸ್ ಕಟ್ಟದೇ ಕಾರ್ಯಾಚರಣೆ ಮಾಡ್ತಿದ್ದ ಬಸ್‌ಗಳನ್ನ ಸೀಜ್ ಮಾಡಲಾಗಿದೆ. ಸೀಜ್ ಮಾಡಿದ ಕೆಲ ಬಸ್‌ಗಳನ್ನ ಆರ್‌ಟಿಓ ಕಚೇರಿ, ಪೊಲೀಸ್ ಠಾಣೆಗಳ ಆವರಣದಲ್ಲಿ ಪಾರ್ಕ್ ಮಾಡಲಾಗಿದೆ. ಇನ್ನೂ ಸೀಜ್ ಮಾಡಿದ ನೂರಾರು ವಾಹನಗಳನ್ನು ನಿಲ್ಲಿಸೋಕೆ ದೇವನಹಳ್ಳಿ ಸಮೀಪ ಇಲಾಖೆಯಿಂದ ಸೀಜರ್ ಯಾರ್ಡ್ ಎಂಬ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಲಾಗಿದೆ.
ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸೋಕೆ ಸಾರಿಗೆ ಇಲಾಖೆಗೆ ಜಾಗದ ಕೊರತೆ ಇತ್ತು. ಹೀಗಾಗಿ ಎರಡು ಸೀಜರ್ ಯಾರ್ಡ್ ಸ್ಥಳಗಳನ್ನ ಮಾಡಿಕೊಳ್ಳಲಾಗಿದೆ. ಇಲ್ಲಿ ನೂರಾರು ಬಸ್, ಇತರೆ ವಾಹನಗಳನ್ನ ನಿಲ್ಲಿಸಬಹುದು. ಅದೇನೆ ಇರಲಿ ಟ್ಯಾಕ್ಸ್ ವಂಚನೆ ಮಾಡಿ, ರಸ್ತೆಯಲ್ಲಿ ಬಿಂದಾಸ್ ಆಗಿ ಬ್ಯುಸಿನೆಸ್ ಮಾಡ್ತಿದ್ದ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆ ಮಾಸ್ಟರ್ ಸ್ಟ್ರೋಕ್ ಕೊಡ್ತಿದೆ. ಕೆಲ ಮಾಲೀಕರು ಟ್ಯಾಕ್ಸ್ ಕಟ್ಟೋದ್ದಕ್ಕೆ ಮುಂದೆ ಬರ್ತಿದ್ದಾರೆ. ಇದನ್ನೂ ಓದಿ: ಚಿನ್ನದಂತೆ ಗಲ್ಫ್ ರಾಷ್ಟ್ರಗಳಿಂದ ಡೀಸೆಲ್ ಸ್ಮಗ್ಲಿಂಗ್ – ರಾಜ್ಯದಲ್ಲಿ ಅಕ್ರಮ ತೈಲ ಉತ್ಪನ್ನ ಸಾಗಾಟ!


