ಮುಂಬೈ: 15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದ್ದ ವಿವೋ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿ ಟಾಟಾ ತೆಕ್ಕೆಗೆ ಶೀರ್ಷಿಕೆ ಪ್ರಯೋಜಕತ್ವವನ್ನು ಬಿಸಿಸಿಐ ನೀಡಿದೆ.
ಇಂದು ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ವಿವೋ ಜೊತೆಗಿನ ಶೀರ್ಷಿಕೆ ಪ್ರಾಯೋಜಕತ್ವವನ್ನು ರದ್ದು ಪಡಿಸುವ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಬಿಸಿಸಿಐ ಹೊಸ ಶೀರ್ಷಿಕೆ ಪ್ರಾಯೋಜಕತ್ವವನ್ನು ಭಾರತದ ಉದ್ಯಮರಂಗದಲ್ಲಿ ಹೆಸರುವಾಸಿಯಾಗಿರುವ ಟಾಟಾ ಗ್ರೂಪ್‍ಗೆ ನೀಡಿದೆ.
Advertisement
Advertisement
ಕೆಲ ವರ್ಷಗಳಿಂದ ವಿವೋ ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. ಇದೀಗ 2022 ಮತ್ತು 2023 ಅವಧಿಯಲ್ಲಿ ವಿವೋದೊಂದಿಗಿನ ಒಪ್ಪಂದ ಕೊನೆಗೊಳ್ಳುವುದರಿಂದ ಹೊಸ ಶೀರ್ಷಿಕೆ ಪ್ರಾಯೋಜಕತ್ವವನ್ನು ಟಾಟಾ ಪಡೆದುಕೊಂಡಿದೆ. ಹಾಗಾಗಿ 15ನೇ ಆವೃತ್ತಿ ಐಪಿಎಲ್‍ನ್ನು ಟಾಟಾ ಐಪಿಎಲ್ ಎಂದು ಕರೆಯಲಾಗುತ್ತದೆ.
Advertisement
Advertisement
2018ರಲ್ಲಿ ಚೀನಾ ಮೂಲದ ಸ್ಮಾರ್ಟ್ ಫೋನ್ ಕಂಪನಿ ವಿವೋ 440 ಕೋಟಿ ರೂ.ಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತು. ಆ ಬಳಿಕ 2020ರ ಐಪಿಎಲ್ ವೇಳೆಗೆ ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದದಿಂದಾಗಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿದಿತ್ತು. ಆಗ ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. ಬಳಿಕ 14ನೇ ಆವೃತ್ತಿ ವೇಳೆ ಮತ್ತೆ ವಿವೋ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಒಪ್ಪಂದದ ಪ್ರಕಾರ 2023ರ ವರೆಗೆ ವಿವೋ ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಮುಂದುವರಿಯ ಬೇಕಿತ್ತು. ಆದರೆ ಇದೀಗ ಐಪಿಎಲ್ ಆಡಳಿತ ಮಂಡಳಿ ನಿರ್ಧಾರದಂತೆ 2022 ಮತ್ತು 2023ರ ಅವಧಿಯ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಟಾಟಾ ಗ್ರೂಪ್‍ಗೆ ನೀಡಿದೆ.
ಈ ಬಾರಿಯ ಐಪಿಎಲ್‍ನ ಮೆಗಾ ಹರಾಜು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಕೊಂಡಿದೆ ಎಂದು ವರದಿಯಾಗಿದೆ.