ನವದೆಹಲಿ: ಭಾರತದ ಪ್ರತಿಷ್ಠಿತ ಅಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ (Tata Motors) ಕೊನೆಗೂ ಪಶ್ಚಿಮ ಬಂಗಾಳ (West Bengal) ಸರ್ಕಾರದ ವಿರುದ್ಧದ ದಾವೆಯನ್ನು ಗೆದ್ದುಕೊಂಡಿದೆ.
ಸಿಂಗೂರಿನಲ್ಲಿ (Singur) ಟಾಟಾ ಫ್ಯಾಕ್ಟರಿ ಸ್ಥಾಪನೆ ಮಾಡಲು ಹೂಡಿಕೆ ಮಾಡಿ ನಷ್ಟ ಉಂಟು ಮಾಡಿದ್ದಕ್ಕೆ ಟಾಟಾ ಕಂಪನಿ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDC) ವಿರುದ್ಧ ಕೇಸ್ ದಾಖಲಿಸಿತ್ತು.
Advertisement
ದಶಕಗಳಿಂದ ನಡೆಯುತ್ತಿರುವ ಕಾನೂನು ಸಮರವನ್ನು ಟಾಟಾ ಮೋಟಾರ್ಸ್ ಗೆದ್ದುಕೊಂಡಿದೆ. ಟಾಟಾ ಮೋಟಾರ್ಸ್‌ಗೆ ನಷ್ಟ ಉಂಟು ಮಾಡಿದ್ದಕ್ಕೆ WBIDCಗೆ 766 ಕೋಟಿ ರೂ. ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಲಯ ಆದೇಶಿಸಿದೆ. ಟಾಟಾ ಮೋಟಾರ್ಸ್ ಮುಂಬೈ ಷೇರು ಮಾರುಕಟ್ಟೆಗೆ ಈ ಪ್ರಕರಣದ ಮಾಹಿತಿಗಳನ್ನು ಸಲ್ಲಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಭಿವೃದ್ಧಿ Vs ಅನುದಾನ: ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡ್ಬೇಡಿ- ಸಿದ್ದರಾಮಯ್ಯ ಸೇಡಿನ ಆರೋಪಕ್ಕೆ ಕೇಂದ್ರ ತಿರುಗೇಟು
Advertisement
I certainly welcome the Landmark Ruling of a Three-Member Arbitral Tribunal, which has directed The West Bengal Industrial Development Corporation (WBIDC) to pay Rs 768.78 crore to Tata Motors, alongwith an interest of 11 per cent per annum from September 1, 2016 till actual… pic.twitter.com/Cw1Ouo1JlX
— Suvendu Adhikari • শুভেন্দু অধিকারী (@SuvenduWB) October 30, 2023
Advertisement
ಏನಿದು ಪ್ರಕರಣ?
2006ರಲ್ಲಿ ಎಡ ಸರ್ಕಾರ 1 ಸಾವಿರ ಎಕ್ರೆ ಜಾಗವನ್ನು ಹೂಗ್ಲಿ ಬದಿಯಲ್ಲಿರುವ ಸಿಂಗೂರಿನಲ್ಲಿ ಸ್ವಾಧೀನ ಪಡಿಸಿ ನಂತರ ಆ ಭೂಮಿಯನ್ನು ಟಾಟಾ ಕಂಪನಿಗೆ ಹಸ್ತಾಂತರಿಸಿತ್ತು. ಟಾಟಾ ಕಂಪನಿ ಈ ಜಾಗದಲ್ಲಿ ನ್ಯಾನೋ ಕಾರು (Nano Car) ಉತ್ಪಾದನಾ ಘಟಕ ತೆರೆಯಲು ಮುಂದಾಗಿತ್ತು.
Advertisement
ಟಾಟಾ ಕಂಪನಿಗೆ ಭೂಮಿ ನೀಡಿದ್ದಕ್ಕೆ ಅಂದಿನ ವಿರೋಧ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಬಲವಾಗಿ ವಿರೋಧಿಸಿದ್ದರು. ರಾಜಕೀಯ ಹೈಡ್ರಾಮಾದ ಬಳಿಕ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಟಾಟಾ ಕಂಪನಿಯನ್ನು ರಾಜ್ಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಒಪ್ಪಿ ಟಾಟಾ ಕಂಪನಿ ಗುಜರಾತಿನ ಸನಂದ್‌ಗೆ ಶಿಫ್ಟ್ ಆಗಿತ್ತು. ಈ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮಾಡಿ ಆದ ನಷ್ಟವನ್ನು ಭರಿಸಿ ಕೊಡುವಂತೆ ಟಾಟಾ ಮೋಟಾರ್ಸ್ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು.
Web Stories