– ಟಾಪ್ 5ರ ಒಳಗಡೆ ಮೂರು ಮಾರುತಿ ಕಾರುಗಳಿಗೆ ಸ್ಥಾನ
– 2024 ರಲ್ಲಿ ಒಟ್ಟು 42.86 ಲಕ್ಷ ಕಾರುಗಳು ಮಾರಾಟ
ನವದೆಹಲಿ: ಉತ್ಪನ್ನದಲ್ಲಿ ಹೊಸತನ ಇದ್ದಲ್ಲಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ 40 ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ (India Car Market) ನಂಬರ್ ಒನ್ ಸ್ಥಾನದಲ್ಲಿದ್ದ ಮಾರುತಿ ಸುಜುಕಿ (Maruti Suzuki) ಕಂಪನಿಯನ್ನು ದೇಶೀಯ ಕಂಪನಿ ಟಾಟಾ ಮೋಟಾರ್ಸ್ (Tata Motors) ಹಿಂದಿಕ್ಕಿದೆ.
ಹೌದು. ಇಲ್ಲಿಯವರೆಗೆ ದೇಶದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಮಾರುತಿ ಕಂಪನಿಯ ಕಾರುಗಳೇ ಮಾರಾಟವಾಗುತ್ತಿದ್ದವು. ಆದರೆ 2024 ರಲ್ಲಿ ಟಾಟಾ ಕಂಪನಿಯ ಪಂಚ್ (Tata Punch) ಅತಿ ಹೆಚ್ಚು ಮಾರಾಟವಾಗುವ ಮೂಲಕ ಮಾರುತಿಯ ದಾಖಲೆಯನ್ನು ಬ್ರೇಕ್ ಮಾಡಿದೆ.
Advertisement
ಅಟೋ ಕಾರು ಪ್ರೋ ವರದಿಯ ಪ್ರಕಾರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ (Wagon R) ಮತ್ತು ಸ್ವಿಫ್ಟ್ (Swift) ಅನ್ನು ಹಿಂದಿಕ್ಕಿದೆ. ವ್ಯಾಗನ್ ಆರ್ 1,90,855 ಮಾರಾಟವಾದರೆ ಟಾಟಾ ಪಂಚ್ 2,02,030 ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
Advertisement
ಯಾವ ಕಾರು ಎಷ್ಟು ಮಾರಾಟ
1. ಟಾಟಾ ಪಂಚ್ (SUV) – 2,02,030
2. ವ್ಯಾಗನ್ ಆರ್(Hatchback) – 1,90,855
3. ಮಾರುತಿ ಎರ್ಟಿಗಾ(MUV) – 1,90,091
4. ಮಾರುತಿ ಬ್ರೀಜಾ (SUV) – 1,88, 160
5. ಹುಂಡೈ ಕ್ರೇಟಾ (SUV) – 1,86,919
Advertisement
ಮಾರುತಿ ಕಂಪನಿಯ ಕಾರು ಮೊದಲ ಸ್ಥಾನ ಪಡೆಯದೇ ಇದ್ದರೂ ಟಾಪ್-5 ರಲ್ಲಿ ಮೂರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಭಾರತದ ಗ್ರಾಹಕರು ಬೆಲೆ ಕಡಿಮೆ ಜೊತೆಗೆ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದರು. ಆದರೆ ಈಗ ಸುರಕ್ಷತೆಯ ಜೊತೆ ಮೈಲೇಜ್ ನೀಡುವ ಕಾರುಗಳತ್ತ ಗಮನ ನೀಡುತ್ತಿದ್ದು ಕ್ಯಾಂಪಕ್ಟ್ ಎಸ್‌ಯುವಿ, ಎಸ್‌ಯುವಿ ಕಾರಿನತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ.
Advertisement
2024 ರಲ್ಲಿ ಒಟ್ಟು 42.86 ಲಕ್ಷ ಕಾರುಗಳು ಮಾರಾಟವಾಗಿದ್ದು ಮಾರುತಿ ಕಾರುಗಳ ಮಾರುಕಟ್ಟೆ 41%ಕ್ಕೆ ಕುಸಿದಿದೆ. ವಿಶೇಷವಾಗಿ 10 ಲಕ್ಷ ರೂ. ಒಳಗಿನ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆ ಇರುವುದರಿಂದ ಮಾರುತಿ ಕಾರುಗಳ ಮಾರುಕಟ್ಟೆ ಕುಸಿತವಾಗಿದೆ. ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್ 1: ಗಡ್ಕರಿ ಭವಿಷ್ಯ
2018 ರಲ್ಲಿ ಭಾರತದಲ್ಲಿ ಒಟ್ಟು 33.49 ಲಕ್ಷ ಕಾರುಗಳು ಮಾರಾಟವಾಗಿತ್ತು. ಈ ಸಂದರ್ಭದಲ್ಲಿ ಟಾಪ್-5 ಒಳಗಡೆ ಎಲ್ಲಾ ಮಾರುತಿ ಕಂಪನಿಯ ಕಾರುಗಳೇ ಸ್ಥಾನ ಪಡೆದಿದ್ದವು.
ಯಾವ ಕಂಪನಿಯ ಕಾರುಗಳಿಗೆ ಮೊದಲ ಸ್ಥಾನ?
1957 – 1984 : ಅಂಬಾಸಿಡರ್( ಹಿಂದೂಸ್ಥಾನ್ ಮೋಟಾರ್ಸ್)
1985-2004 – ಮಾರುತಿ 800
2005-2017 – ಮಾರುತಿ ಅಲ್ಟೋ ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ
ಯಾವ ವರ್ಷ ಯಾವ ಕಾರು ಹೆಚ್ಚು ಮಾರಾಟ?
2018 – ಮಾರುತಿ ಡಿಸೈರ್ – 2,64,612
2019 – ಮಾರುತಿ ಅಲ್ಟೋ – 2,08,087
2020 – ಮಾರುತಿ ಸ್ವಿಫ್ಟ್ – 1,60,765
2021 – ಮಾರುತಿ ವ್ಯಾಗನ್ ಆರ್ – 1,83,851
2022 – ಮಾರುತಿ ವ್ಯಾಗನ್ ಆರ್ – 2,17,317
2023 – ಮಾರುತಿ ಸ್ವಿಫ್ಟ್ – 2,03,469
2024 – ಟಾಟಾ ಪಂಚ್ – 2,02,030
2021 ರಲ್ಲಿ ಬಿಡುಗಡೆಯಾದ ಪಂಚ್ 190 mm ಗ್ರೌಂಡ್ ಕ್ಲಿಯರೆನ್ಸ್, ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, EBD ಜೊತೆಗೆ ABS, ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಹೊಂದಿದೆ. 5 ಸ್ಟಾರ್ ಸೇಫ್ಟಿ ರೇಟಿಂಗ್ ಹೊಂದಿರುವುದರಿಂದ ಪಂಚ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ.
ಗ್ಲೋಬಲ್ NCAP ನಿಂದ ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್ ಪಡೆದುಕೊಂಡಿದೆ. ಭಾರತ್ NCAP ಮಾನದಂಡಗಳ ಅಡಿಯಲ್ಲಿ ಪರೀಕ್ಷೆಗೊಳಪಡಿಸಿದ ಎಲ್ಲಾ ಟಾಟಾ ವಾಹನಗಳಲ್ಲಿ ಪಂಚ್ ಇವಿ ಅತ್ಯಧಿಕ ಸುರಕ್ಷತಾ ರೇಟಿಂಗ್ ಪಡೆದಿದೆ.