ಮುಂಬೈ: ದೇಶದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ (Tata Motors) ತನ್ನ ವಾಣಿಜ್ಯ ವಾಹನಗಳ (Commercial Vehicle) ಮೇಲಿನ ಬೆಲೆಯನ್ನು ಶೇ.5ರಷ್ಟು ಹೆಚ್ಚಿಸಲಿದೆ. ಏಪ್ರಿಲ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.
Advertisement
BS6ನ 2ನೇ ಹಂತದ ನಿಯಮಗಳ ಪಾಲನೆಯು ಜಾರಿಗೆ ಬರುತ್ತಿರುವ ಹೊತ್ತಿನಲ್ಲಿ ಬೆಲೆ ಏರಿಕೆ ತೀರ್ಮಾನ ಹೊರಬಿದ್ದಿದೆ. ಬೆಲೆ ಏರಿಕೆಯಲ್ಲಿ ಮಾದರಿಯಿಂದ ಮಾದರಿಗೆ ವ್ಯತ್ಯಾಸ ಇರಲಿದೆ. ಈ ಮಾನದಂಡಗಳನ್ನು ಪೂರೈಸಲು ಟಾಟಾ ಮೋಟರ್ಸ್ ತನ್ನ ಸಂಪೂರ್ಣ ವಾಹನ ಪೋರ್ಟ್‌ಫೋಲಿಯೊವನ್ನು ಪರಿವರ್ತಿಸುವುದರಿಂದ ಗ್ರಾಹಕರಿಗೆ ಲಾಭದಾಯಕವಾಗಲಿದೆ. ಇದನ್ನೂ ಓದಿ: ಗ್ಲಾಮರಸ್ ಲುಕ್‌ನ ಕವಾಸಕಿ Versys 1000 ಭಾರತದಲ್ಲಿ ಬಿಡುಗಡೆ – ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?
Advertisement
Advertisement
ಈ ಬದಲಾವಣೆಯಿಂದ ಟಾಟಾ ಮೋಟರ್ಸ್ ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಕೆಡಿಮೆ ವೆಚ್ಚದಲ್ಲಿ ಸ್ವಚ್ಛತೆ, ಪರಿಸರ ಸ್ನೇಹಿ ಹಾಗೂ ತಾಂತ್ರಿಕವಾಗಿಯೂ ಉನ್ನತ ಕೊಡುಗೆಗಳನ್ನ ನಿರೀಕ್ಷಿಸಬಹುದು ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಅತ್ಯಾಕರ್ಷಕ ಹೋಂಡಾ H’ness CB350, CB350RS ಬೈಕ್ ಭಾರತದಲ್ಲಿ ಬಿಡುಗಡೆ