ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಆಪಲ್ (Apple) ಕಂಪನಿಯ ಐಫೋನ್ (iPhone) ಉತ್ಪಾದನೆ ಭಾರತದಲ್ಲಿ (India) ಹೊಸ ಬದಲಾವಣೆಗಳನ್ನು ತಂದಿದೆ. ಈಗಾಗಲೇ ಐಫೋನ್ 14, ಐಫೋನ್ 13 ಹಾಗೂ ಇತರ ಹೊಸ ಫೋನ್‌ಗಳನ್ನು ಭಾರತದಲ್ಲಿ ತಯಾರಿಸಿದೆ. ಭಾರತದಲ್ಲಿ ಐಫೋನ್ ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಫಾಕ್ಸ್ಕಾನ್ (Foxconn) ಹಾಗೂ ವಿಸ್ಟ್ರಾನ್ (Wistron) ಸೇರಿದೆ. ಆದರೆ ಇದೀಗ ಭಾರತದಲ್ಲಿ ಆಪಲ್‌ನ ಐಫೋನ್ ತಯಾರಿಸುವ ಜವಾಬ್ದಾರಿಯನ್ನು ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ವಹಿಸಿಕೊಳ್ಳಲು ಸಜ್ಜಾಗುತ್ತಿದೆ.
ಆಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಭಾರತದಲ್ಲಿ ತನ್ನ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತದೆ. ಇದೀಗ ತೈವಾನ್‌ನ ಎಲೆಕ್ಟ್ರಾನಿಕ್ಸ್ ಕಂಪನಿಯನ್ನು ಶೀಘ್ರದಲ್ಲೇ ಟಾಟಾ ಎಲೆಕ್ಟ್ರಾನಿಕ್ಸ್ ಸ್ವಾಧೀನಪಡಿಸಿಕೊಳ್ಳಲಿದ್ದು, ಐಫೋನ್ ತಯಾರಿಕೆಯ ಜವಾಬ್ದಾರಿಯನ್ನೂ ಕೈಗೆತ್ತಿಕೊಳ್ಳಲಿದೆ.
ಭಾರತದಲ್ಲಿ ವಿಸ್ಟ್ರಾನ್‌ನ ಘಟಕ ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದೆ. ಸುಮಾರು 4,000 ರಿಂದ 5,000 ಕೋಟಿ ರೂ. ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ ತಯಾರಿಸುವ ದೇಶದ 3 ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ
ಸುಮಾರು 5 ವರ್ಷಗಳ ಹಿಂದೆ ವಿಸ್ಟ್ರಾನ್ ಐಫೋನ್ ಎಸ್‌ಸಿ 2 ನೊಂದಿಗೆ ಐಫೋನ್ ತಯಾರಿಸಲು ಪ್ರಾರಂಭಿಸಿತ್ತು. ಪ್ರಸ್ತುತ ಕಂಪನಿ ಭಾರತದಲ್ಲಿ ಐಫೋನ್ ಎಸ್‌ಸಿ, ಐಫೋನ್ 12, ಐಫೋನ್ 13 ಹಾಗೂ ಐಫೋನ್ 14 ಅನ್ನು ತಯಾರಿಸುತ್ತಿದೆ.
ಆಪಲ್ ಭಾರತಕ್ಕೆ 20 ವರ್ಷಗಳ ಹಿಂದೆ ಲಗ್ಗೆಯಿಟ್ಟಿದ್ದು, ಸುದೀರ್ಘ ಇತಿಹಾಸವನ್ನು ಹೊಂದಿದೆ. 2020ರ ಸೆಪ್ಟೆಂಬರ್‌ನಲ್ಲಿ ಆಪಲ್ ದೇಶದಲ್ಲಿ ತನ್ನ ಆನ್‌ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿತು. ಇತ್ತೀಚೆಗಷ್ಟೇ ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈ ಹಾಗೂ ದೆಹಲಿಯಲ್ಲಿ ಉದ್ಘಾಟನೆಗೊಂಡಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?