ರಾಯಚೂರು: ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಬೂದಿವಾಳ ಕ್ರಾಸ್ ಬಳಿ ಟಾಟಾ ಏಸ್ (Tata Ace) ಹಾಗೂ ಮಹೀಂದ್ರಾ ಬೊಲೆರೊ ಪಿಕಪ್ (Bolero Pick- Up) ಮುಖಾಮುಖಿ ಡಿಕ್ಕಿ(Accident) ಸಂಭವಿಸಿ ಐವರು ಸಾವನ್ನಪ್ಪಿದ್ದು ಮೂವರಿಗೆ ಗಾಯಗಳಾಗಿವೆ.
ಮೃತರು ಬಳ್ಳಾರಿಯ ಚೆಳ್ಳೆ ಕೂಡ್ಲೂರಿನ ವರ್ಷದ ಸಣ್ಣ ಯಲ್ಲಯ್ಯ(40), ರಂಗನಾಥ(15), ಹರಿ (36) ಮಲ್ಲಯ್ಯ ಮಧುರಿ(50) ಮೃತ ದುರ್ದೈವಿಗಳು. ಮೃತರಲ್ಲಿ ಸಣ್ಣ ಯಲ್ಲಯ್ಯ ಹಾಗೂ ರಂಗನಾಥ ತಂದೆ, ಮಗನಾಗಿದ್ದರೆ ಇನ್ನೋರ್ವ ಮೃತನ ಗುರುತು ಪತ್ತೆಯಾಗಿಲ್ಲ. ಅಪಘಾತದಲ್ಲಿ ಟಾಟಾ ಏಸ್ ನಲ್ಲಿದ್ದ ಕುರಿಗಳು ಸಹ ಸಾವನ್ನಪ್ಪಿವೆ. ಇದನ್ನೂ ಓದಿ: ಇವಿಎಂ ಬದಲು ಬ್ಯಾಲೆಟ್ ಪೇಪರ್‌ನಲ್ಲಿ ಜಿಬಿಎ ಚುನಾವಣೆ – ಡಿಕೆ ಸುರೇಶ್ ಅಪಸ್ವರ
ಪಿಕಪ್‌ನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಟಾಟಾ ಏಸ್‌ನಲ್ಲಿದ್ದ ಮೂವರು ಗಾಯಾಳುಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

