ಪಿಜ್ಜಾ, ಬರ್ಗರ್ ಸ್ಯಾಂಡ್‌ವಿಚ್‌ನಂತಹ ತಿಂಡಿಗಳನ್ನು ಈಗಿನ ಮಕ್ಕಳ ಮುಂದಿಟ್ಟರೆ ಕಣ್ಣುಮುಚ್ಚಿ ತಿನ್ನುತ್ತಾರೆ. ಆದರೆ ಎಷ್ಟೋ ಅಮ್ಮಂದಿರಿಗೆ ಈ ರೆಸಿಪಿ ಮಾಡಲು ಗೊತ್ತಿರುವುದಿಲ್ಲ. ಹಾಗಿದ್ದರೆ ನಮ್ಮ ರೆಸಿಪಿಯನ್ನೊಮ್ಮೆ ನೋಡಿ. ಓವನ್ ಇಲ್ಲದೇ ಕೇವಲ ತವಾದಲ್ಲಿ ಪಿಜ್ಜಾ ಸ್ಯಾಂಡ್‌ವಿಚ್ ಮಾಡುವುದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್‌ನ ಕಾರ್ನ್ ಸೂಪ್ ಮನೆಯಲ್ಲೇ ಮಾಡಿ
Advertisement
ಬೇಕಾಗುವ ಸಾಮಾಗ್ರಿಗಳು:
ಹೆಚ್ಚಿದ ಈರುಳ್ಳಿ – 1 ಕಪ್
ದೊಣ್ಣೆ ಮೆಣಸು – 1 ಕಪ್
ಬೇಯಿಸಿದ ಸ್ವೀಟ್ ಕಾರ್ನ್ – 1 ಕಪ್
ಹೆಚ್ಚಿದ ಟೊಮೆಟೊ – 1
ಚಿಲ್ಲಿ ಫ್ಲೇಕ್ಸ್ – ಸ್ವಲ್ಪ
ಪಿಜ್ಜಾ ಮಿಕ್ಸ್ ಪೌಡರ್ – ಅಗತ್ಯಕ್ಕೆ ತಕ್ಕಷ್ಟು
ಉಪ್ಪು- ರುಚಿಗೆ ತಕ್ಕಷ್ಟು
ತುರಿದ ಚೀಸ್ – 1 ಕಪ್
ಬ್ರೆಡ್- 2
ಬೆಣ್ಣೆ- ಸ್ವಲ್ಪ
ಟೊಮೆಟೊ ಸಾಸ್- ಸ್ವಲ್ಪ
ಮಯೋನಿಸ್- ಸ್ವಲ್ಪ
Advertisement
Advertisement
ಮಾಡುವ ವಿಧಾನ:
Advertisement
- ಮೊದಲಿಗೆ ಒಂದು ಬೌಲಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಳ್ಳಿ. ಅದಕ್ಕೆ ಹೆಚ್ಚಿದ ದೊಣ್ಣೆ ಮೆಣಸು, ಬೇಯಿಸಿದ ಜೋಳ ಹಾಗೂ ಟೊಮೆಟೊ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ನಂತರ ಅದಕ್ಕೆ ಚಿಲ್ಲಿ ಫ್ಲೇಕ್ಸ್, ಪಿಜ್ಜಾ ಮಿಕ್ಸ್ ಪೌಡರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ತುರಿದ ಚೀಸ್ ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ.
- ಈಗ ಎರಡು ಬ್ರೆಡ್ ಅನ್ನು ತೆಗೆದುಕೊಂಡು ಅದರ ಒಂದು ಬದಿಗೆ ಸ್ವಲ್ಪ ಬೆಣ್ಣೆಯನ್ನು ಹಚ್ಚಿಕೊಳ್ಳಿ. ಹಾಗೆಯೇ ಒಂದು ಬ್ರೆಡ್‌ನ ಇನ್ನೊಂದು ಬದಿಗೆ ಟೊಮೆಟೊ ಸಾಸ್ ಹಾಗೂ ಇನ್ನೊಂದು ಬ್ರೆಡ್‌ನ ಹಿಂಬದಿಗೆ ಸ್ವಲ್ಪ ಮಯೋನೀಸ್ ಹಾಕಿಕೊಳ್ಳಿ. ನಂತರ ಮಯೋನೀಸ್ ಹಚ್ಚಿದ ಬ್ರೆಡ್‌ನ ಮೇಲೆ ತರಕಾರಿ ಮಿಶ್ರಣವನ್ನು ಎಷ್ಟು ಬೇಕು ಅಷ್ಟು ಹಾಕಿಕೊಂಡು ಟೊಮೆಟೊ ಸಾಸ್ ಇರುವ ಬ್ರೆಡ್ ಅನ್ನು ಅದಕ್ಕೆ ಮುಚ್ಚಿ. ಬೆಣ್ಣೆ ಹಚ್ಚಿದ ಭಾಗ ಮೇಲ್ಗಡೆ ಇರುವಂತೆ ನೋಡಿಕೊಳ್ಳಿ.
- ಈಗ ಗ್ಯಾಸ್ ಮೇಲೆ ಒಂದು ಗ್ರಿಲ್ ಪ್ಯಾನ್ ಅಥವಾ ತವಾ ಇಟ್ಟುಕೊಂಡು ಬಿಸಿ ಮಾಡಿಕೊಳ್ಳಿ. ತವಾ ಬಿಸಿಯಾದ ಬಳಿಕ ಅದಕ್ಕೆ ಸ್ಟಫ್ ಮಾಡಿದ್ದ ಬ್ರೆಡ್ ಅನ್ನು ಇಟ್ಟುಕೊಂಡು ಚನ್ನಾಗಿ ರೋಸ್ಟ್ ಮಾಡಿಕೊಳ್ಳಿ. ಎರಡೂ ಬದಿ ಚನ್ನಾಗಿ ರೋಸ್ಟ್ ಆಗಿ ಕಂದು ಬಣ್ಣ ಬಂದ ಮೇಲೆ ಒಂದು ಪ್ಲೇಟ್‌ಗೆ ತೆಗೆದಿಡಿ.
- ರೋಸ್ಟ್ ಮಾಡಿದ್ದ ಪಿಜ್ಜಾ ಸ್ಯಾಂಡ್‌ವಿಚ್ ಅನ್ನು ಬಿಸಿ ಇರುವಾಗಲೇ ಅರ್ಧ ತುಂಡು ಮಾಡಿ ಮಕ್ಕಳಿಗೆ ಮತ್ತು ಮನೆಯವರಿಗೆ ಸವಿಯಲು ಕೊಡಿ. ಜೊತೆಗೆ ನೀವೂ ಸವಿದು ಆನಂದಿಸಿ. ಇದನ್ನೂ ಓದಿ: ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್