ಟೀ ಪಾರ್ಟಿಗೆ ಮಾಡಿ ಪೈನಾಪಲ್ ಕುಕ್ಕೀಸ್

Public TV
1 Min Read
PINEAPPLE COOKIES

ಸ್ನೇಹಿತರು, ಆತ್ಮೀಯರು ಮತ್ತು ಕುಟುಂಬದವರು ಸಂಜೆ ಟೀ ಪಾರ್ಟಿ ಮಾಡುತ್ತಾರೆ. ಈ ಪಾರ್ಟಿಗಳಲ್ಲಿ ಅನೇಕ ರೀತಿಯ ತಿಂಡಿ ತಿನಿಸುಗಳಿರುತ್ತವೆ. ನಿಮ್ಮ ಟೀ ಟೈಮ್ ಪಾರ್ಟಿಗೆ ಫರ್ಪೆಕ್ಟ್ ಮ್ಯಾಚ್ ಆಗುವಂತಹ ಒಂದು ರೆಸಿಪಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದರ ಹೆಸರೇ ಪೈನಾಪಲ್ ಕುಕ್ಕೀಸ್. ಇದನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಟೀ ಜೊತೆ ಸವಿಯಬಹುದು. ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಒಮ್ಮೆ ಸವಿದ್ರೆ ರುಚಿ ಮರೆಯಲ್ಲ – ಕಾಶ್ಮೀರ್ ಆಪಲ್ ಖೀರ್ ಮಾಡಿ ನೋಡಿ

PINEAPPLE COOKIES 1

ಬೇಕಾಗುವ ಸಾಮಗ್ರಿಗಳು:
ಮೈದಾ ಅಥವಾ ಗೋಧಿ ಹಿಟ್ಟು – 500 ಗ್ರಾಂ
ಬೆಣ್ಣೆ – 425 ಗ್ರಾಂ
ಪೈನಾಪಲ್ ಎಸೆನ್ಸ್ – 1 ಚಮಚ
ಸಕ್ಕರೆ – 230 ಗ್ರಾಂ
ಸಣ್ಣಗೆ ಹೆಚ್ಚಿದ ಪೈನಾಪಲ್ ತುಂಡುಗಳು – 100 ಗ್ರಾಂ

PINEAPPLE COOKIES 3

ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಾಲೆಗೆ ಬೆಣ್ಣೆ ಮತ್ತು ಸಕ್ಕರೆಯನ್ನು ಹಾಕಿ ಹದವಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಗೋಧಿ ಹಿಟ್ಟನ್ನು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.
* ನಂತರ ಇದಕ್ಕೆ ಪೈನಾಪಲ್ ಎಸೆನ್ಸ್ ಮತ್ತು ಹೆಚ್ಚಿದ ಪೈನಾಪಲ್ ತುಂಡುಗಳನ್ನು ಸೇರಿಸಿಕೊಂಡು ಹದವಾದ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ವಲ್ಪ ಪ್ರಮಾಣದ ಹಿಟ್ಟನ್ನು ತೆಗೆದುಕೊಂಡು ಕುಕ್ಕೀಸ್ ರೀತಿಯಲ್ಲಿ ದುಂಡಗಿನ ಶೇಪ್ ಬರುವಂತೆ ಅಂಗೈಯಲ್ಲಿ ತಟ್ಟಿಕೊಳ್ಳಿ. ಅದೇ ರೀತಿ ಎಲ್ಲಾ ಕುಕ್ಕೀಸ್‌ಗಳನ್ನು ಮಾಡಿಟ್ಟುಕೊಳ್ಳಿ.
* ಬಳಿಕ ಒಂದು ಟ್ರೇಯಲ್ಲಿ ಬೇಕಿಂಗ್ ಪೇಪರ್ ಹಾಕಿಕೊಂಡು ಅದರಲ್ಲಿ ಕುಕ್ಕೀಸ್‌ಗಳನ್ನು ಇಟ್ಟುಕೊಂಡು ಓವನ್‌ನಲ್ಲಿ 180 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ 15 ರಿಂದ 20 ನಿಮಿಷ ಬೇಯಿಸಿಕೊಳ್ಳಿ. ನಂತರ ಇದನ್ನು ಒಂದು ಪ್ಲೇಟ್‌ಗೆ ಹಾಕಿಕೊಂಡು ಆರಲು ಬಿಡಿ. ಈಗ ಪೈನಾಪಲ್ ಕುಕ್ಕೀಸ್ ಸರ್ವ್ ಮಾಡಲು ಸಿದ್ಧ. ಇದನ್ನೂ ಓದಿ: ದಾಹಕ್ಕೆ ಸವಿಯಿರಿ ಕೂಲ್ ಕೂಲ್ ಕಲ್ಲಂಗಡಿ ಮೊಜಿಟೊ

Share This Article