ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಕೆಎಫ್‌ಸಿಯಲ್ಲಿ ಸಿಗುವ ತಿನಿಸುಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ರುಚಿಕರ ಎನಿಸುವ ಈ ತಿನಿಸುಗಳನ್ನು ನಾವು ಕೂಡಾ ಹಲವು ರೆಸಿಪಿಗಳಲ್ಲಿ ಹೇಳಿ ಕೊಟ್ಟಿದ್ದೇವೆ. ನಾವಿಂದು ಅಂತಹುದೇ ಇನ್ನೊಂದು ರೆಸಿಪಿ ಹೇಳಿಕೊಡುತ್ತೇವೆ. ಚಿಕನ್‌ನಂತೆಯೇ ರುಚಿಯಾದ ಫ್ಯೂರ್ ವೆಜ್ ಸೋಯಾಬೀನ್ ನಗ್ಗೆಟ್ಸ್ (Soybean Nuggets) ಮಾಡುವುದು ಹೇಗೆಂದು ತಿಳಿಸುತ್ತೇವೆ. ನೀವೂ ಇದನ್ನು ಮಾಡಿ, ಟೀ ಟೈಮ್‌ನಲ್ಲಿ ಆನಂದಿಸಿ.
Advertisement
ಬೇಕಾಗುವ ಪದಾರ್ಥಗಳು:
ಸೋಯಾ ಮಿಶ್ರಣಕ್ಕಾಗಿ:
ಸೋಯಾಬೀನ್ – 2 ಕಪ್
ಬೆಚ್ಚಗಿನ ನೀರು – ನೆನೆಸಲು
ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಗರಂ ಮಸಾಲಾ ಪುಡಿ – ಅರ್ಧ ಟೀಸ್ಪೂನ್
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ಮುಕ್ಕಾಲು ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಬೇಯಿಸಿ ಹಿಸುಕಿದ ಆಲೂಗಡ್ಡೆ – 2
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಸ್ಲರಿ ತಯಾರಿಸಲು:
ಕಾರ್ನ್ ಫ್ಲೋರ್ – ಅರ್ಧ ಕಪ್
ಮೈದಾ – ಅರ್ಧ ಕಪ್
ಕಾಳುಮೆಣಸಿನ ಪುಡಿ – ಕಾಲು ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ನೀರು – ಹಿಟ್ಟು ತಯಾರಿಸಲು
ಇತರ ಪದಾರ್ಥಗಳು:
ಕಾರ್ನ್ ಫ್ಲೇಕ್ಸ್ – 1 ಕಪ್
ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್‌ನ ಟೇಸ್ಟಿ ಪನೀರ್ ಪಸಂದ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಸೋಯಾಬೀನ್ ತೆಗೆದುಕೊಂಡು, ಬೆಚ್ಚಗಿನ ನೀರಿನಲ್ಲಿ 20 ನಿಮಿಷ ನೆನೆಸಿ.
* ನೀರನ್ನು ಬಸಿದು ಚೆನ್ನಾಗಿ ತೊಳೆಯಿರಿ.
* ಸೋಯಾಬೀನ್‌ಗಳನ್ನು ಹಿಂಡಿ ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ಒರಟಾಗಿ ಪುಡಿ ಮಾಡಿ.
* ಈಗ ಅವುಗಳನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ, ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ.
* ಬಳಿಕ ಆಲೂಗಡ್ಡೆ ಮತ್ತು ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಬೆರೆಸಿ.
* ಮಿಶ್ರಣವನ್ನು ಚೆನ್ನಾಗಿ ಸಂಯೋಜಿಸಿ, ಹಿಸುಕಿಕೊಂಡು ಮಿಶ್ರಣ ಮಾಡಿ.
* ಈಗ ಮಿಶ್ರಣವನ್ನು ಸಣ್ಣ ಸಣ್ಣಚೆಂಡಿನ ಗಾತ್ರಗಳಾಗಿ ಭಾಗ ಮಾಡಿ ನಿಮ್ಮಷ್ಟದ ಆಕಾರ ನೀಡಿ ಪಕ್ಕಕ್ಕಿಡಿ. ಸಂಪೂರ್ಣ ಮಿಶ್ರಣವನ್ನು ಹೀಗೇ ಮಾಡಿ.
* ಈಗ ಸ್ಲರಿ ತಯಾರಿಸಲು ಒಂದು ಬಟ್ಟಲಿಗೆ ಕಾರ್ನ್ ಫ್ಲೋರ್, ಮೈದಾ, ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಅಗತ್ಯವಿರುವಂತೆ ನೀರನ್ನು ಸೇರಿಸಿ ನಯವಾದ ಹಿಟ್ಟನ್ನು ತಯಾರಿಸಿ.
* ಇನ್ನೊಂದು ಬಟ್ಟಲಿನಲ್ಲಿ ಕಾರ್ನ್ ಫ್ಲೆಕ್ಸ್ ಅನ್ನು ಸ್ವಲ್ಪ ಪುಡಿ ಮಾಡಿ ಹರಡಿ ಇಟ್ಟುಕೊಳ್ಳಿ.
* ಈಗ ಆಕಾರ ನೀಡಲಾದ ಸೋಯಾ ನಗ್ಗೆಟ್ಸ್‌ಗಳನ್ನು ಸ್ಲರಿಯಲ್ಲಿ ಅದ್ದಿ, ಬಳಿಕ ಕಾರ್ನ್ ಫ್ಲೇಕ್ಸ್ ಮೇಲೆ ಇಟ್ಟು ಪೂರ್ತಿಯಾಗಿ ಕೋಟ್ ಆಗುವಂತೆ ರೋಲ್ ಮಾಡಿ.
* ಬಿಸಿ ಎಣ್ಣೆಯಲ್ಲಿ ನಗ್ಗೆಟ್ಸ್‌ಗಳನ್ನು ಬಿಟ್ಟು, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹಾಗೂ ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.
* ಇದೀಗ ಚಿಕನ್‌ನಂತಹುದೇ ರುಚಿಯ ಸೋಯಾಬೀನ್ ನಗ್ಗೆಟ್ಸ್ ತಯಾರಾಗಿದ್ದು, ಚಹಾದ ಸಮಯದಲ್ಲಿ ಅಥವಾ ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ರುಚಿಯಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ನೀವೊಮ್ಮೆ ಮಾಡಿ ಸವಿಯಿರಿ