ಬೆಂಗಳೂರು: ರಾಜಧಾನಿಯಲ್ಲಿ ಅರೆಸ್ಟ್ ಆಗಿರುವ ಐವರು ಶಂಕಿತ ಉಗ್ರರು (Suspected Terrorists) ಇಂಡಿಯಾ ಒಕ್ಕೂಟದ ಸಭೆಯನ್ನು (INDIA Meeting) ಟಾರ್ಗೆಟ್ ಮಾಡಿದ್ದರು ಎಂಬ ಸ್ಫೋಟಕ ವಿಚಾರ ಪ್ರಕಟವಾಗಿದೆ.
ವಿರೋಧ ಪಕ್ಷದ ನಾಯಕರ ಸಭೆಯ ವೇಳೆ ಭಾರೀ ಭದ್ರತೆಯ ಕಾರಣದಿಂದ ಈ ಸಂಚು ವಿಫಲವಾಗಿದೆ. ಇದರಿಂದಾಗಿ ಸಭೆಗೆ ಸೇರಿದ್ದ ನಾಯಕರು ಸೇಫ್ ಆಗಿದ್ದಾರೆ. ಶಂಕಿತರ ವಿಚಾರಣೆಯ ವೇಳೆ ಈ ಮಾಹಿತಿಗಳು ಹೊರ ಬಿದ್ದಿವೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!
ಸಭೆ ಟಾರ್ಗೆಟ್ ತಪ್ಪಿದ್ದರಿಂದ ಇನ್ನೆರಡು ದಿನಗಳಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಪೊಲೀಸರು ಒಂದು ದಿನ ತಡ ಮಾಡಿದ್ದರೂ ಸಹ ಭಾರೀ ಅನಾಹುತಕ್ಕೆ ಬೆಂಗಳೂರು (Bengaluru) ಸಾಕ್ಷಿಯಾಗುತ್ತಿತ್ತು. ಈ ಬಗ್ಗೆ ಗುಪ್ತಚರ ಇಲಾಖೆ ಹಾಗೂ ಗೃಹ ಸಚಿವರಿಂದ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ.
ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಪೈಜಲ್ ರಬ್ಬಾನಿ ಈ ಐವರು ಶಂಕಿತ ಉಗ್ರರನ್ನು ಬೆಂಗಳೂರು ಸಿಸಿಬಿ ಪೊಲಿಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತರಿಂದ ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ, ಸಜೀವ ಗುಂಡುಗಳು ಹಾಗೂ ಪಿಸ್ತೂಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]