ಬೆಂಗಳೂರು: ದರ್ಶನ್ ಸಿನಿಮಾಗಳ ಸ್ಟೈಲೇ ಹಾಗೆ. ಸೈಲೆಂಟಾಗಿ ಬಂದು ಸುಂಟರಗಾಳಿಯಂತೆ ಸೌಂಡ್ ಮಾಡುತ್ತದೆ. ಇದೀಗ ತಾರಕ್ ಸಿನಿಮಾ ವಿಚಾರದಲ್ಲೂ ಅದೇ ಆಗಿದ್ದು. ಸೈಲೆಂಟಾಗೇ ಬಂದಿದ್ದ `ತಾರಕ್’ ಇದೀಗ 50 ದಿನವನ್ನು ಪೂರೈಸಿದೆ.
ದರ್ಶನ್ ಫಿಲ್ಮೋಗ್ರಫಿಯ 49ನೇ ಚಿತ್ರವಾಗಿ ತೆರೆಕಂಡಿದ್ದು ತಾರಕ್. ಹಾಗೆ ನೋಡೋದಾದರೆ ದರ್ಶನ್ ಮಾಡದಿರೋ ಪಾತ್ರಗಳಿಲ್ಲ. ಆದರೆ `ತಾರಕ್’ ಬರೋದಕ್ಕೂ ಮುಂಚೆ ದರ್ಶನ್ ಅಂದ್ರೆ ಮಾಸ್ ಹೀರೋ ಎನ್ನುವ ಇಮೇಜ್ ಒಂದಿತ್ತು. ಆದರೆ ತಾರಕ್ ಸಾಬೀತು ಮಾಡಿರೋದು ದರ್ಶನ್ ಕೌಟುಂಬಿಕ ಪ್ರೇಕ್ಷಕರನ್ನೂ ಸೆಳೆಯಬಲ್ಲರು ಎನ್ನುವ ವಿಷಯ.
Advertisement
ತಾರಕ್ ಚಿತ್ರಕ್ಕೆ ನೀವು ತೋರಿದ ಪ್ರೀತಿಗೆ ನಾವು ಸದಾ ಚಿರಋಣಿ. ನನ್ನ ಮುಂದಿನ ಚಿತ್ರಗಳ ಬಗ್ಗೆ ಸಮಯ ಬಂದಾಗ ನಾನೇ ತಿಳಿಸುವೆ ????
– ನಿಮ್ಮ ದಾಸ ದರ್ಶನ್ pic.twitter.com/HIaR8LmkwL
— Darshan Thoogudeepa (@dasadarshan) October 9, 2017
Advertisement
`ತಾರಕ್’ ಚಿತ್ರದಲ್ಲಿ ದರ್ಶನ್ ಫುಲ್ ಫ್ಲೆಜ್ಡ್ ಸೆಂಟಿಮೆಂಟ್ ಪಾತ್ರದಲ್ಲಿ ಅಭಿನಯಿಸಿದರು. ಹಾಗಂತ ಹಿಂದೆ ಇಂಥ ಪಾತ್ರಗಳಲ್ಲಿ ಕಾಣಿಸ್ಕೊಂಡಿಲ್ಲ ಎಂದಲ್ಲ. ನಮ್ಮ ಪ್ರೀತಿಯ ರಾಮು, ಲಾಲಿಹಾಡು ಸೇರಿದಂತೆ ಅನೇಕ ಚಿತ್ರಗಳಲ್ಲಿ ದರ್ಶನ್ ಫ್ಯಾಮಿಲಿ ಆಡಿಯನ್ಸ್ ಗಳ ಮನ ಗೆದ್ದಿದ್ದರು.
Advertisement
ತೀರಾ ಇತ್ತೀಚೆಗೆ ದರ್ಶನ್ ಮಾಸ್ ಎಂಟರ್‍ಟೈನರ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಆದರೆ `ತಾರಕ್’ ಚಿತ್ರದಿಂದಾಗಿ ದರ್ಶನ್ ಫ್ಯಾನ್ಸ್ ಗ್ರೂಪ್ ಮತ್ತಷ್ಟು ಜಾಸ್ತಿಯಾಯ್ತು. ದರ್ಶನ್ ಎಂದರೆ ಮಾಸ್ ಹೀರೋ ಅಷ್ಟೇ ಅಲ್ಲ ಕ್ಲಾಸ್ ಅಂಡ್ ಫ್ಯಾಮಿಲಿ ಓರಿಯೆಂಟೆಡ್ ಹೀರೊ ಕೂಡ ಹೌದು ಎಂದಾಯಿತು. ದರ್ಶನ್ ವರ್ಸಟೈಲ್ ಆ್ಯಕ್ಟರ್ ಎನ್ನುವುದು ಸಾಬೀತಾಯಿತು.
Advertisement
ಸದ್ಯದ ಸಂದರ್ಭದಲ್ಲಿ ಒಂದು ಸಿನಿಮಾ 50 ದಿನ ಪ್ರದರ್ಶನ ಕಂಡರೆ ಅದು ದೊಡ್ಡ ವಿಷಯ. ಇಂಥಹ ವೇಳೆಯಲ್ಲಿ ತಾರಕ್ ರಾಜ್ಯದ ಹತ್ತಾರು ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿ 100 ನೇ ದಿನದತ್ತ ಮುನ್ನುಗ್ಗುತ್ತಿದೆ. ಸೈಲೆಂಟಾಗಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಂತೂ ಗೆಲುವಿನ ಪತಾಕೆ ಹಾರಿಸಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳು ಇಂದಿಗೂ ಫ್ಯಾಮಿಲಿ ಆಡಿಯನ್ಸ್ ಗಳಿಂದ ತುಂಬಿ ತುಳುಕುತ್ತಿವೆ.