ಈಗಾಗಲೇ ‘ಕಬ್ಜ’ (Kabzaa) ಸಿನಿಮಾದ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿರುವ ನಿರ್ದೇಶಕ ಆರ್.ಚಂದ್ರು, ಈ ನಡುವೆ ಮತ್ತೊಂದು ಅಚ್ಚರಿ ಸುದ್ದಿಯನ್ನೂ ನೀಡಿದ್ದಾರೆ. ಕಬ್ಜ ಸಿನಿಮಾಗಾಗಿ ಸ್ಪೆಷಲ್ ಸಾಂಗ್ (Special Song) ಚಿತ್ರೀಕರಣಕ್ಕೆ ಅವರು ಸಿದ್ಧತೆ ಮಾಡಿಕೊಂಡಿದ್ದು, ಈ ವಿಶೇಷ ಹಾಡಿಗೆ ತಾನ್ಯ ಹೋಪ್ (Tanya Hope) ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಜಮಾನ ಸಿನಿಮಾಗಾಗಿ ‘ಬಸಣ್ಣಿ ಬಾ’ ಗೀತೆಗೆ ಸೊಂಟ ಬಳುಕಿಸಿದ್ದ ತಾನ್ಯ, ಕಬ್ಜ ಸಿನಿಮಾದ ಹಾಡಿನಲ್ಲೂ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.
Advertisement
ಈ ಹಾಡಿನ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗುತ್ತಿದ್ದು, ಪೂರ್ತಿ ಹಾಡು ಇದೇ ಸೆಟ್ ನಲ್ಲೇ ಚಿತ್ರೀಕರಣವಾಗಲಿದೆ. ತಾನ್ಯ ಜೊತೆ ಸುದೀಪ್ ಹೆಜ್ಜೆ ಹಾಕುತ್ತಾರಾ ಅಥವಾ ಉಪೇಂದ್ರ ಇರಲಿದ್ದಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಈ ಸಿನಿಮಾದಲ್ಲಿ ಇನ್ನೂ ಹಲವು ಅಚ್ಚರಿಯ ಕಲಾವಿದರು ಇರಲಿದ್ದಾರಂತೆ. ಆ ಕಲಾವಿದರ ಕುರಿತಂತೆ ಹೆಚ್ಚಿನ ಮಾಹಿತಿ ಸಿನಿಮಾದಲ್ಲೇ ಸಿಗಲಿದೆ ಎಂದಿದ್ದಾರೆ ಚಂದ್ರು. ಇದನ್ನೂ ಓದಿ:ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ
Advertisement
Advertisement
ಕಿಚ್ಚ ಸುದೀಪ್ (Sudeep), ಉಪೇಂದ್ರ (Upendra) ಮತ್ತು ಆರ್.ಚಂದ್ರು ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಅಂದು ಈ ಸಿನಿಮಾವನ್ನು ಬಿಡುಗಡೆ ಮಾಡುವ ತಯಾರಿ ಕೂಡ ನಡೆದಿದೆ. ಆರೇಳು ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಈಗಾಗಲೇ ನಿರ್ದೇಶಕರು ತಿಳಿಸಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k