Advertisements

ಸಂಸಾರದ ತೊಂದರೆ ಸರಿಪಡಿಸುವ ನೆಪದಲ್ಲಿ ಮಾಂತ್ರಿಕನಿಂದ 79 ದಿನ ಮಹಿಳೆಯ ಮೇಲೆ ಅತ್ಯಾಚಾರ

ಭುವನೇಶ್ವರ: ಸಂಸಾರದ ತೊಂದರೆ ಸರಿಪಡಿಸುವ ನೆಪದಲ್ಲಿ ಮಾಂತ್ರಿಕನೊಬ್ಬ ವಿವಾಹಿತ ಮಹಿಳೆಯ ಮೇಲೆ 79 ದಿನ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

Advertisements

ತನ್ನ ಅತ್ತೆಯೇ ಜ್ಯೋತಿಷಿಯೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ, ಸಂತ್ರಸ್ತ ಮಹಿಳೆ ಮಾಂತ್ರಿಕ, ಪತಿ ಮತ್ತ ಆತನ ಪೋಷಕರು ಹಾಗೂ ಕಿರಿಯ ಸಹೋದರನ ವಿರುದ್ಧ ಜಲೇಶ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನಿದ್ರೆ ಮಾಡುತ್ತಿರುವಾಗಲೇ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

Advertisements

ಆರೋಪಿ ಜ್ಯೋತಿಷಿಯನ್ನು ಎಸ್ಕೆ ತರಫ್ ಎಂದು ಗುರುತಿಸಲಾಗಿದೆ. ಮಹಿಳೆ ನೀಡಿದ ದೂರಿನ ಅನ್ವಯ, ಜ್ಯೋತಿಷಿ ತನ್ನ ಮೇಲೆ 79 ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಬಾಲಸೋರ್‌ನ ಭೋಗ್ರಾಯ್ ಬ್ಲಾಕ್‌ನ ಕಖಾರಾ ಗ್ರಾಮದ ಈತ ಮಯೂರ್‌ಭಂಜ್ ಜಿಲ್ಲೆಯ ಬೈಂಚ್‌ಡಿಹಾ ಗ್ರಾಮದಲ್ಲಿ ವಾಮಾಚಾರ ಅಭ್ಯಾಸ ಮಾಡುತ್ತಿದ್ದಾನೆ ಎಂದು ದುರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ವರ ಧೋತಿ-ಕುರ್ತಾ ಬದಲು ಶೇರ್ವಾನಿ ಧರಿಸಿದ್ದಕ್ಕೆ ಮದುವೆ ಮನೆಯಾಯ್ತು ರಣರಂಗ 

ಘಟನೆ ನಡೆದಿದ್ದೇನು?: ಮಹಿಳೆಯು 2017ರಲ್ಲಿ ತನ್ನ ಮದುವೆಯಾದಾಗಿನಿಂದ, ಅತ್ತೆಯೊಂದಿಗೆ ತೊಂದರೆ ಎದುರಿಸುತ್ತಿದ್ದಳು. ಆಕೆಯ ಅತ್ತೆ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಪತಿಗೆ ಹೇಳಿದರೂ ಕಿವಿಗೊಡುತ್ತಿರಲಿಲ್ಲ. ಇತ್ತೀಚೆಗೆ, ತನ್ನ ಪತಿ ಅಂಗಡಿ ಪ್ರಾರಂಭಿಸಲು ಬೇರೆ ನಗರಕ್ಕೆ ತೆರಳಿದ್ದರು. ಈ ವೇಳೆ ಅತ್ತೆ ನನ್ನನ್ನು ಓರ್ವ ಮಾಂತ್ರಿಕನ ಬಳಿಗೆ ಕರೆದೊಯ್ದರು. ಅವನು ತನ್ನ ವೈವಾಹಿಕ ಸಮಸ್ಯೆಗಳನ್ನು ಪರಿಹರಿಸುತ್ತಾನೆ ಎಂದೂ ಭರವಸೆ ಮೂಡಿಸಿದ್ದರು. ಆದರೆ ಮಹಿಳೆ ಕೆಲವು ದಿನಗಳವರೆಗೆ ಅವನ ಸ್ಥಳದಲ್ಲಿ ಇರಬೇಕಾಗುತ್ತದೆ ಎಂದು ಹೇಳಿ. ಆಕೆಯ ವಿರೋಧವಿದ್ದರೂ ಮಾಂತ್ರಿಕನೊಂದಿಗೆ ಬಿಡಲಾಯಿತು. ಈ ವೇಳೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

Advertisements

ಸಂತ್ರಸ್ತ ಮಹಿಳೆ ತನ್ನನ್ನು ಕೋಣೆಯಲ್ಲಿ ಲಾಕ್ ಮಾಡಿದ್ದರಿಂದ ಅಲ್ಲೇ ಇರಬೇಕಾಯಿತು. ಕೊನೆಗೆ ಹೇಗೋ ಸೆಲ್ ಫೋನ್ ಹುಡುಕಿಕೊಂಡು ಕುಟುಂಬದವರಿಗೆ ಸಂದೇಶ ಕಳುಹಿಸಿದ್ದಾಳೆ. ತಕ್ಷಣ ಆಕೆಯ ಪೋಷಕರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅರೆಸ್ಟ್ 

ಮಾಹಿತಿ ನೀಡಿರುವ ಬಾಲಸೋರ್ ಪೊಲೀಸ್ ಎಸ್‌ಪಿ ಸುಧಾಂಶು ಮಿಶ್ರಾ, ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಜಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Advertisements
Exit mobile version