CrimeLatestMain PostNational

ವರ ಧೋತಿ-ಕುರ್ತಾ ಬದಲು ಶೇರ್ವಾನಿ ಧರಿಸಿದ್ದಕ್ಕೆ ಮದುವೆ ಮನೆಯಾಯ್ತು ರಣರಂಗ

ಭೋಪಾಲ್: ವರನೊಬ್ಬ ‘ಧೋತಿ ಕುರ್ತಾ’ ಬದಲು ‘ಶೇರ್ವಾನಿ’ ಧರಿಸಿ ಮದುವೆ ಮನೆಗೆ ಒಂದಿದ್ದಕ್ಕೆ ಗಲಾಟೆ ಸೃಷ್ಟಿಯಾಗಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಮದುವೆ ಮನೆಯಲ್ಲಿ ವರ ‘ಧೋತಿ ಕುರ್ತಾ’ ಬಂದಲು ‘ಶೇರ್ವಾನಿ’ ಹಾಕಿದ್ದಕ್ಕೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ‘ಧೋತಿ ಕುರ್ತಾ’ ಧರಿಸದ ಕಾರಣ ವರ ಮತ್ತು ವಧುವಿನ ಕುಟುಂಬದವರ ನಡುವೆ ವಾಗ್ವಾದ ನಡೆದಿದ್ದು, ಎರಡು ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.  ಇದನ್ನೂ ಓದಿ: ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ – ವೀಡಿಯೋ ವೈರಲ್‌

ನಡೆದಿದ್ದೇನು?
ವಧುವಿನ ಕುಟುಂಬವು ವರನು ತಮ್ಮ ಬುಡಕಟ್ಟು ಸಂಪ್ರದಾಯದಂತೆ ಮದುವೆ ವೇಳೆ ‘ಧೋತಿ-ಕುರ್ತಾ’ ಧರಿಸಬೇಕು. ‘ಶೆರ್ವಾನಿ’ ಅಲ್ಲ ಎಂದು ಹೇಳಿದರು. ಆದರೆ ಧಾರ್ ನಗರದ ನಿವಾಸಿಯಾದ ವರ ಸುಂದರ್‌ಲಾಲ್ ಅವರು ಶೆರ್ವಾನಿ ಧರಿಸಿದ್ದ. ಈ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬದವರು ವಾಗ್ವಾದ ಮಾಡಲು ಪ್ರಾರಂಭ ಮಾಡಿದ್ದಾರೆ. ಇದು ಅತಿರೇಕಕ್ಕೆ ಹೋಗಿ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆ ಹಲವರಿಗೆ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾರೆ ಎಂದು ಧಮನೋಡ್ ಪೊಲೀಸ್ ಠಾಣೆ ಪ್ರಭಾರಿ ಸುಶೀಲ್ ಯದುವಂಶಿ ತಿಳಿಸಿದ್ದಾರೆ.

ಠಾಣೆ ಮುಂದೆ ಪ್ರತಿಭಟನೆ
ಘಟನೆಯ ನಂತರ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಮನೋದ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ವಧುವಿನ ಸಂಬಂಧಿಕರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಠಾಣೆಯಲ್ಲಿ ಕೆಲವು ಮಹಿಳೆಯರು ಆರೋಪಿಸಿದ್ದಾರೆ.

ಅಲ್ಲದೇ ಎರಡೂ ಕಡೆಯವರು ಪೊಲೀಸರಿಗೆ ದೂರುಗಳನ್ನು ಸಲ್ಲಿಸಿದರು. ಅದರ ಆಧಾರದ ಮೇಲೆ ಕೆಲವು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 294(ಅಶ್ಲೀಲ ಕೃತ್ಯ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 506(ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವರ ಸುಂದರ್‌ಲಾಲ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು, ವಧುವಿನ ಕುಟುಂಬದೊಂದಿಗೆ ನಮಗೆ ಯಾವುದೇ ತೊಂದರೆಯಿಲ್ಲ. ಆದರೆ ಆಕೆಯ ಕೆಲವು ಸಂಬಂಧಿಕರು ನಮ್ಮ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿವಾದವು ಉಡುಪಿನ ಬಗ್ಗೆ ಪ್ರಾರಂಭವಾಯಿತು. ಆದರೆ ಕೊನೆಗೆ ಅದು ತೀವ್ರವಾಯಿತು. ನಮ್ಮ ಮೇಲೆ ಹಲ್ಲೆ ಮತ್ತು ಕಲ್ಲು ತೂರಾಟದಲ್ಲಿ ತೊಡಗಿರುವರ ವಿರುದ್ಧ ಮಾತ್ರ ಕ್ರಮಕೈಗೊಳ್ಳಲು ನಾನು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅರೆಸ್ಟ್ 

ಆದರೂ ಸಹ ಶನಿವಾರ, ವಧು ಮತ್ತು ವರನ ಕುಟುಂಬಗಳು ಧಾರ್ ನಗರಕ್ಕೆ ತಲುಪಿ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published.

Back to top button