ಬೀಜಿಂಗ್: ಠೇವಣಿದಾರರು ತಮ್ಮ ಹಣವನ್ನು ಡ್ರಾ ಮಾಡಲು ಆಗದ ಕಾರಣ ಚೀನಾದ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರನ್ನು ಚದುರಿಸಲು ಬ್ಯಾಂಕ್‍ನ ಮುಂದೆ ಟ್ಯಾಂಕರ್‍ಗಳನ್ನು ಸಾಲುಗಟ್ಟಿ ನಿಲ್ಲಿಸಿದ ವೀಡಿಯೋ ವೈರಲ್ ಆಗುತ್ತಿದೆ.
ಶಾಂಡೋಂಗ್ ಪ್ರಾಂತ್ಯದ ರಿಝಾವೊದ ಬ್ಯಾಂಕ್‍ವೊಂದರಲ್ಲಿ ಸಿಸ್ಟಮ್ ಅಪ್‍ಗ್ರೇಡ್ ಕಾರಣದಿಂದಾಗಿ ಬ್ಯಾಂಕ್ ಖಾತೆಗಳ ಎಕ್ಸಸ್‍ನ್ನು ನಿರಾಕರಿಸಲಾಗಿದೆ. ಈ ಸಮಸ್ಯೆಯು ಏಪ್ರಿಲ್‍ನಲ್ಲೇ ಕಾಣಿಸಿಕೊಂಡಿದೆ. ಚೀನಾದಾದ್ಯಂತದ 1,000ಕ್ಕೂ ಹೆಚ್ಚು ಠೇವಣಿದಾರರು ದೇಶದ ಸೆಂಟ್ರಲ್ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾದ ಝೆಂಗ್‍ಝೌ ಶಾಖೆಯ ಹೊರಗೆ ಪ್ರತಿಭಟನೆಯನ್ನು ಮಾಡಿದ್ದರು.
Advertisement
????????????????Breaking news????????????????
Tanks are being put on the streets in China to protect the banks.
This is because the Henan branch of the Bank of China declaring that people’s savings in their branch are now ‘investment products’ and can’t be withdrawn.
????sound pic.twitter.com/cwTPjGz84K
— Wall Street Silver (@WallStreetSilv) July 20, 2022
ಅಷ್ಟೇ ಅಲ್ಲದೇ ಕಳೆದ ತಿಂಗಳು ಠೇವಣಿದಾರರ ಚಲನವಲನಗಳನ್ನು ನಿರ್ಬಂಧಿಸಲು ಮತ್ತು ಅವರ ಯೋಜಿತ ಪ್ರತಿಭಟನೆಯನ್ನು ತಡೆಯಲು ದೇಶದ ಡಿಜಿಟಲ್ ಕೋವಿಡ್ ಹೆಲ್ತ್-ಕೋಡ್ ವ್ಯವಸ್ಥೆಯನ್ನು ತಿದ್ದಲು ಸಹ ಬ್ಯಾಂಕ್‍ನ ಅಧಿಕಾರಿಗಳು ಪ್ರಯತ್ನಿಸಿದ್ದರು. ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೂ ಕಾರಣವಾಗಿತ್ತು. ಅಷ್ಟೇ ಅಲ್ಲದೇ 40 ಶತಕೋಟಿ ಯುವಾನ್ (47 ಸಾವಿರ ಕೋಟಿ ರೂ.) ಠೇವಣಿಗಳು ಕಣ್ಮರೆಯಾಗಿವೆ.
Advertisement
ಅಂದಿನಿಂದ ಗ್ರಾಮೀಣ ಬ್ಯಾಂಕ್‍ನಲ್ಲಿರುವ ಠೇವಣಿಗಳ ಮೇಲೆ ಪರಿಣಾಮ ಬಿದ್ದಿದೆ. ಇದರಿಂದಾಗಿ ಆ ಬ್ಯಾಂಕ್‍ನಿಂದ ಯಾರಿಗೂ ಹಣವನ್ನು ಡ್ರಾ ಮಾಡಲಾಗುತ್ತಿಲ್ಲ. ಇದರಿಂದಾಗಿ ಈಗಾಗಲೇ ಬ್ಯಾಂಕಿಂಗ್ ಬಿಕ್ಕಟ್ಟಿನಿಂದ ತೊಂದರೆಗೀಡಾದ ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
Advertisement
1. Massive protest out break in Henan province,China.
More than 3000 protesters who are victim of bank financial fraud show up in capital City of Henan.
None of them can withdraw money from account now.
info credit @Qwaszx179730654pic.twitter.com/HXuJmZZYSj
— 巴丢草 Badiucao (@badiucao) July 10, 2022
ಈ ಹಿನ್ನೆಲೆಯಲ್ಲಿ ಭಾನುವಾರ ಬ್ಯಾಂಕ್‌ನಲ್ಲಿ ತಾವು ಇಟ್ಟ ಠೇವಣಿ ಹಣವನ್ನು ವಾಪಾಸ್ ನೀಡುವಂತೆ ಚೀನಾದ ಪ್ರಜೆಗಳು ಹೆನಾನ್ ಪ್ರಾಂತ್ಯದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತೆರಳಿತ್ತು. ಪ್ರತಿಭಟನಾಕಾರರ ಮೇಲೆ ಚೀನಾದ ಸ್ಥಳೀಯ ಪೊಲೀಸ್ ಹಾಗೂ ಸಮವಸ್ತ್ರದಲ್ಲಿಲ್ಲದ ಕೆಲ ವ್ಯಕ್ತಿಗಳು ಬಂದು ಮನಬಂದಂತೆ ಥಳಿಸುವ ಮೂಲಕ ಕ್ರೌರ್ಯ ಮೆರೆದಿದ್ದರು. ಇದೀಗ ಬ್ಯಾಂಕ್ ಶಾಖೆಯ ಮೇಲೆ ಸ್ಥಳೀಯರ ಪ್ರತಿಭಟನೆಯನ್ನು ತಡೆಯಲು ಟ್ಯಾಂಕರ್‌ಗಳನ್ನು ನಿಲ್ಲಿಸಿ ಬ್ಯಾಂಕ್‍ಗೆ ಯಾರೂ ಹೋಗದಂತೆ ಬ್ಲಾಕ್ ಮಾಡಿದ್ದಾರೆ. ಇದನ್ನೂ ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲು
Advertisement
1989ರಲ್ಲಿ ನಡೆದ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ನೂರಾರು ಟ್ಯಾಂಕರ್‌ಗಳನ್ನು ಬಳಸಿತ್ತು. ಇದು ಪುನಃ ಸಂಭವಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಟೋಲ್‍ನಲ್ಲಿ ಹಸು ಮಲಗಿದ್ದೇ ಅಪಘಾತಕ್ಕೆ ಕಾರಣ – ಅಂಬುಲೆನ್ಸ್ ಚಾಲಕನ