‘ಬಿಗ್ ಬಾಸ್’ (Bigg Boss Kannada 10) ಬೆಡಗಿ ತನಿಷಾ ಕುಪ್ಪಂಡ (Tanisha Kuppanda) ದೊಡ್ಮನೆ ಆಟ ಮುಗಿದ ಮೇಲೆ ಸಖತ್ ಬ್ಯುಸಿಯಾಗಿದ್ದಾರೆ. ನಟನೆ, ಉದ್ಯಮ ಕ್ಷೇತ್ರಗಳಲ್ಲಿ ತನಿಷಾ ಬ್ಯುಸಿಯಾಗಿದ್ದಾರೆ. ಸದ್ಯ ‘ನನ್ನಮ್ಮ ಸೂಪರ್ ಸ್ಟಾರ್-3’ರಲ್ಲಿ (Nanamma Super Star 3) ತನಿಷಾ ಭಾಗಿಯಾಗಿದ್ದಾರೆ. ಈ ಕುರಿತ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥ ಸಂಭ್ರಮದಲ್ಲಿ ಕೌಸ್ತುಭ ಮಣಿ
ಸಿನಿಮಾ ಕೆಲಸ, ಪೇಡ್ ಪ್ರಮೋಷನ್, ಹೋಟೆಲ್ ಬ್ಯುಸಿನೆಸ್ ಎಂದು ಸದಾ ಬ್ಯುಸಿಯಾಗಿರುವ ನಟಿ ಈಗ ‘ನನ್ನಮ್ಮ ಸೂಪರ್ ಸ್ಟಾರ್’-3 ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದು, ಮಕ್ಕಳ ಜೊತೆ ಬೆರೆತು ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ, ಶೋನಲ್ಲಿ ತನಿಷಾ ಅಡುಗೆ ಕೂಡ ಮಾಡಿದ್ದಾರೆ. ಬಳಿಕ ಹಿರಿಯ ನಟಿ ತಾರಾ, ಮತ್ತು ಅನುಪ್ರಭಾಕರ್ ಜೊತೆ ಫೋಟೋ ಕ್ಕಿಕ್ಕಿಸಿಕೊಂಡು ನಟಿ ಸಂಭ್ರಮಿಸಿದ್ದಾರೆ.
View this post on Instagram
ಇತ್ತೀಚೆಗೆ ತನಿಷಾ ಮತ್ತು ಕಾರ್ತಿಕ್ (Karthik Mahesh) ಸಿನಿಮಾ ಮಾಡುವ ಕುರಿತಂತೆ ಮಾತನಾಡಿದ್ದರು. ಈ ಕುರಿತು ಸ್ವತಃ ತನಿಷಾ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ನಮ್ಮದೇ ಬ್ಯಾನರ್‌ನಲ್ಲಿ ಪುಟ್ಟ ಪ್ರಾಜೆಕ್ಟ್‌ವೊಂದನ್ನು ಮಾಡಲು ಹೊರಟ್ಟಿದ್ದೇನೆ. ಕಾರ್ತಿಕ್ ಅವರ ಕಾಲ್‌ಶೀಟ್ ಕೇಳಿದ್ದೇವೆ ಎಂದಿದ್ದರು. ಇದನ್ನೂ ಓದಿ:ಟ್ಯಾಂಕರ್ ಮೂಲಕ ಉಚಿತ ನೀರು ಕೊಟ್ಟ ನಟ ಧ್ರುವ ಸರ್ಜಾ
ಸಿನಿಮಾ ಯಾವುದು, ಏನು ಎನ್ನುವುದರ ಕುರಿತು ತನಿಷಾ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಕಾರ್ತಿಕ್ ಅವರು ಬಿಡುವು ಮಾಡಿಕೊಂಡು, ಕಥೆ ಕೇಳಬೇಕು ಎಂದಷ್ಟೇ ತಿಳಿಸಿದ್ದರು. ಬಿಗ್ ಬಾಸ್ ಮುಗಿದ ನಂತರ ಬಹುತೇಕ ಸ್ಪರ್ಧಿಗಳು ಕಾರ್ಯಕ್ರಮಗಳಲ್ಲಿ ಬಿಜಿ ಆಗಿದ್ದಾರೆ. ಅದರಂತೆ ಕಾರ್ತಿಕ್ ಮತ್ತು ತನಿಷಾ ಒಟ್ಟಾಗಿಯೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿದ್ದಾರೆ.
ಕಾರ್ತಿಕ್ ಈ ಸೀಸನ್‌ನಲ್ಲಿ ವಿನ್ ಆದರೆ, ತನಿಷಾ ಕುಪ್ಪಂಡ ಬೆಂಕಿ ಅಂತಾನೇ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಜೋಡಿ ತೆರೆಯ ಮೇಲೆ ಬರಲಿ ಎನ್ನುವುದು ಹಲವರ ಆಸೆ ಕೂಡ ಇದೆ.