ನವದೆಹಲಿ: ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮಿಳು ಸೂಪರ್ ಸ್ಟಾರ್, ನಟ ರಜನಿಕಾಂತ್ ಸೋಮವಾರ ಸ್ವೀಕರಿಸಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಜನಿಕಾಂತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
Advertisement
???????????????? pic.twitter.com/vkTf6mxYUu
— Rajinikanth (@rajinikanth) October 24, 2021
Advertisement
ಸಮಾರಂಭದಲ್ಲಿ ರಜನಿಕಾಂತ್ ಅಳಿಯ ಧನುಷ್ ಕೂಡ ಹಾಜರಿದ್ದರು. ‘ಅಸುರನ್’ ಸಿನಿಮಾದಲ್ಲಿ ಉತ್ತಮ ನಟನೆಗಾಗಿ ಧನುಷ್, ನ್ಯಾಷನಲ್ ಫಿಲ್ಮ್ ಅವಾರ್ಡ್‍ಗೆ ಭಾಜನರಾಗಿದ್ದಾರೆ. ಹೀಗಾಗಿ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ವೇಳೆ ರಜನಿಕಾಂತ್ ಪತ್ನಿ ಲತಾ ಹಾಗೂ ಪುತ್ರಿ ಐಶ್ವರ್ಯ (ಧನುಷ್ ಪತ್ನಿ) ಕೂಡ ಇದ್ದರು. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್
Advertisement
Legendary actor , Super star Rajinikanth honoured with 51st Dadasaheb Phalke Award@rajinikanth pic.twitter.com/734uxqKNrq
— All India Radio News (@airnewsalerts) October 25, 2021
Advertisement
ಗಾಯಕರಾದ ಆಶಾ ಬೋಸ್ಲೆ, ಶಂಕರ್ ಮಹದೇವನ್, ನಟರಾದ ಮೋಹನಲಾಲ್ ಮತ್ತು ಬಿಸ್ವಜಿತ್ ಚಟರ್ಜಿ, ಚಲನಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಅವರನ್ನೊಳಗೊಂಡ ತಂಡವು ಈ ವರ್ಷದ ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್ ಅವರನ್ನು ಆಯ್ಕೆ ಮಾಡಿತ್ತು. ಇದನ್ನೂ ಓದಿ: ಮೂರು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಲಿರುವ ಪ್ರೇಮಾ
I dedicate this award to my Guru, my mentor K Balachander : @rajinikanth #NationalFilmAwards @MIB_India pic.twitter.com/xEUuF2DDuk
— All India Radio News (@airnewsalerts) October 25, 2021
‘ಎರಡು ವಿಶೇಷ ಹೆಗ್ಗುರುತುಗಳೊಂದಿಗೆ ನಾಳೆ ನನಗೆ ಮಹತ್ವದ ಸಂದರ್ಭವಾಗಿದೆ. ಜನರ ಪ್ರೀತಿ ಮತ್ತು ಬೆಂಬಲದಿಂದಾಗಿ ಭಾರತ ಸರ್ಕಾರ ನನಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುತ್ತಿದೆ. ಮತ್ತೊಂದು ಪ್ರಮುಖ ವಿಚಾರವೆಂದರೆ ಜನರು ಈಗ ತಮ್ಮ ಧ್ವನಿಯ ಮೂಲಕ ತಮ್ಮ ಶುಭಾಶಯಗಳು ಮತ್ತು ಆಲೋಚನೆಗಳನ್ನು ಯಾವುದೇ ಭಾಷೆಯಲ್ಲಿ ಬರೆಯಲು ಮತ್ತು ವ್ಯಕ್ತಪಡಿಸಲು ಸಹಕಾರಿಯಾಗಿ ನನ್ನ ಪುತ್ರಿ ಸೌಂದರ್ಯ ಅವರು ಆ್ಯಪ್‍ವೊಂದನ್ನು ಬಿಡುಗಡೆ ಮಾಡಲಿದ್ದಾರೆ’ ಎಂದು ಭಾನುವಾರ ರಜನಿಕಾಂತ್ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.
Superstar Rajinikanth receives the Dadasaheb Phalke Award at 67th National Film Awards ceremony in Delhi. pic.twitter.com/x8hVKuCgE0
— ANI (@ANI) October 25, 2021