ಚೆನ್ನೈ: ಪೊಲೀಸ್ ಪೇದೆಯೊಬ್ಬಳು ಸೂಪರ್ ಮಾರ್ಕೆಟ್‍ನಲ್ಲಿ ಚಾಕಲೇಟ್ ಕದಿಯುತ್ತ ರೇಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ಎಗ್ಮೋರ್ ನಲ್ಲಿ ನಡೆದಿದೆ.
ಎಂ.ನಂದಿನಿ (34) ಕಳ್ಳತನ ಮಾಡಿ ಸಿಕ್ಕಿ ಬಿದ್ದ ಪೊಲೀಸ್ ಪೇದೆ. ಚಾಕಲೇಟ್ ಕದಿಯುತ್ತಿರುವ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಅದನ್ನು ನೋಡಿದ ಮಾಲೀಕ ತಕ್ಷಣ ಪೊಲೀಸ್ ಪೇದೆಯನ್ನು ವಿಚಾರಿಸಿದ್ದಾರೆ.
Advertisement
ಆಗಿದ್ದು ಏನು?
ನಂದಿನಿ ಬುಧವಾರ ಸೂಪರ್ ಮಾರ್ಕೆಟ್ ಗೆ ಹೋಗಿದ್ದು, ಅಲ್ಲಿ ಚಾಕಲೇಟ್ ಮತ್ತು ಸೊಳ್ಳೆ ಕ್ರಿಮ್ ಅನ್ನು ಕದ್ದು ಬ್ಯಾಗಿನಲ್ಲಿ ಹಾಕಿಕೊಂಡಿದ್ದಾಳೆ. ಆಕೆಯನ್ನು ವಿಚಾರಿಸಿದಾಗ ಹೆದರಿ ಓಡಲು ಶುರುಮಾಡಿದ್ದಾಳೆ. ಮಾರ್ಕೆಟ್ ಸಿಬಂದಿಯೊಬ್ಬರೂ ಅವಳನ್ನು ಹಿಂಬಾಲಿಸಿ ಆಕೆಯ ಬ್ಯಾಗಿನಲ್ಲಿದ್ದ ಚಾಕಲೇಟ್ ಮತ್ತು ಸೊಳ್ಳೆ ಕ್ರಿಮ್ ಪಡೆದುಕೊಂಡಿದ್ದಾರೆ.
Advertisement
ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಆಕೆ ತನ್ನ ವಿರುದ್ಧ ಪೊಲೀಸ್ ದೂರು ನೀಡಬೇಡಿ ಎಂದು ಹೇಳಿ ಕ್ಷಮೆಯಾಚಿಸಿದ್ದಾಳೆ. ಹಾಗಾಗಿ ಮಾಲೀಕರು ಆಕೆಯ ಮೇಲೆ ದೂರು ನೀಡಿರಲಿಲ್ಲ. 115 ರೂ. ಮೌಲ್ಯದ ವಸ್ತುವನ್ನು ಕದ್ದ ಹಿನ್ನೆಲೆಯಲ್ಲಿ ಆಕೆ ಪತ್ರದ ಮೂಲಕ ಕ್ಷಮೆ ಕೇಳಿಕೊಂಡಿದ್ದಾಳೆ.
Advertisement
ಘಟನೆಯ ನಂತರ ನಂದಿನಿ ಈ ವಿಚಾರವನ್ನು ಪತಿಗೆ ತಿಳಿಸಿದ್ದಾಳೆ. ಬಳಿಕ ನಂದಿನಿಯ ಪತಿ ಮೂವರ ಜೊತೆ ಆಗಮಿಸಿ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅಂಗಡಿಯ ಸಿಬ್ಬಂದಿ ಗಲಾಟೆಯನ್ನು ಬಿಡಿಸಲು ಹೋದಾಗ ಅವರ ಮೇಲೆಯೂ ಇವರು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸುತ್ತಿರುವ ದೃಶ್ಯಗಳು ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಹಲ್ಲೆ ನಡೆದ ಬಳಿಕ ಅಂಗಡಿಯ ಮಾಲೀಕನಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆ ಮಹಿಳಾ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತುಗೊಳಿಸಿ, ಆಕೆಯ ಪತಿಯನ್ನು ಬಂಧಿಸಿದ್ದಾರೆ.