ಚೆನ್ನೈ: ಮಾಟಕ್ಕೆ ಒಳಗಾಗಿದ್ದಾಳೆ ಎಂದು ಶಂಕಿಸಲಾದ ಮಹಿಳೆಯರಿಗೆ ಪೂಜಾರಿಯೊಬ್ಬರು ಚಾಟಿಯಿಂದ ಹೊಡೆಯುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಜಿಲ್ಲೆಯ ರಾಸಿಪುರಂ ಬಳಿಯ ನರೈಕಿನಾರ್ ಗ್ರಾಮದಲ್ಲಿ ನಡೆಸಲಾದ ಈ ಧಾರ್ಮಿಕ ಆಚರಣೆಯಲ್ಲಿ, ಪೂಜಾರಿ ಕಾಟೇರಿ (ಕೆಟ್ಟದ್ದನ್ನು ದೂರವಿಡಲು ಗ್ರಾಮಸ್ಥರು ಪ್ರಾರ್ಥಿಸುವ ದೇವತೆಯ ರೂಪ) ವೇಷಭೂಷಣವನ್ನು ಧರಿಸಿ ಹಲವಾರು ಮಹಿಳೆಯರಿಗೆ ಚಾಟಿಯಿಂದ ಹೊಡೆಯುತ್ತಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ
Advertisement
Advertisement
ಈ ಆಚರಣೆಯು 20 ವರ್ಷಗಳ ನಂತರ ನಡೆಯುತ್ತಿದ್ದು, ಮಾಟ ಮಂತ್ರಕ್ಕೆ ಒಳಗಾದ ಮಹಿಳೆಯರನ್ನು ಪೂಜಾರಿ ಹೊಡೆದರೆ ಅವರು ಶಾಪ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ
Advertisement
ವೀಡಿಯೋದಲ್ಲಿ, ಕಪ್ಪು ವಸ್ತ್ರವನ್ನು ಧರಿಸಿರುವ ಪೂಜಾರಿ ಚಾಟಿಯನ್ನು ಹಿಡಿದು ಮಾಟ ಮಂತ್ರಕ್ಕೆ ಒಳಗಾಗಿರುವ ಮಹಿಳೆಯರಿಗೆ ಹೊಡೆಯುವುದನ್ನು ಕಾಣಬಹುದು. ಪೂಜಾರಿ ಮಹಿಳೆಯರಿಗೆ ಹೊಡೆಯಲು ಹೊರಟಾಗ ಅದನ್ನು ನೋಡುತ್ತಿರುವ ಸ್ಥಳೀಯ ಜನರು ಉತ್ಸಾಹದಿಂದ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.
Advertisement
ಈ ಕಾರ್ಯಕ್ರಮವನ್ನು ಕುತೂಹಲದಿಂದ ನೋಡುತ್ತಿದ್ದ ಜನಸಮೂಹವು ತಮಿಳು ಭಾಷೆಯಲ್ಲಿ ಪೋಡು.. ಪೋಡು.. (ಥಳಿಸು.. ಥಳಿಸು..) ಎಂದು ಕೂಗುತ್ತಿರುತ್ತಾರೆ. ನಂತರ ಪೂಜಾರಿ ತನ್ನ ಚಾಟಿ ಎತ್ತಲು ಪ್ರಾರಂಭಿಸುತ್ತಾರೆ. ಈ ವೇಳೆ ಮಹಿಳೆ ಗೌರವದಿಂದ ತನ್ನ ಎರಡು ಕೈಗಳನ್ನು ಮಡಚಿ ನಮಸ್ಕರಿಸುತ್ತಾರೆ. ಮಡಚಿದ ಕೈಗಳನ್ನು ಮೇಲಕ್ಕೆತ್ತಿದ ನಂತರ ಪೂಜಾರಿ ಅವರನ್ನು ಚಾಟಿಯಿಂದ ಹೊಡೆಯಲು ಮುಂದಾಗುತ್ತಾರೆ.
ಈ ಒಂದು ವಿಚಿತ್ರ ಆಚರಣೆಯನ್ನು ನೋಡಲು ಅಕ್ಕಪಕ್ಕದ 18 ಗ್ರಾಮಗಳ ಜನರು ಪಾಲ್ಗೊಂಡಿದ್ದರು. 20 ವರ್ಷಗಳ ನಂತರ ನಡೆದ ಕಾರಣ ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಈ ಆಚರಣೆ ನಡೆದಿರಲಿಲ್ಲ.
ನಾಮಕ್ಕಲ್ ಜಿಲ್ಲೆಯ ವರದರಾಜಪೆರುಮಾಳ್ ಚೆಲ್ಲಿಯಮ್ಮನ್ ಮಾರಿಯಮ್ಮನ್ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ದೇವಸ್ಥಾನದ ಉತ್ಸವಗಳು ಒಂದು ತಿಂಗಳ ಕಾಲ ನಡೆಯುತ್ತವೆ. ಇದು ಏಪ್ರಿಲ್ 29 ರಂದು ಪ್ರಾರಂಭವಾಗಿದ್ದು, ಮೇ 30 ರಂದು ಕೊನೆಗೊಳ್ಳಲಿದೆ.