EDಯಿಂದ ತಮಿಳುನಾಡು ಅಬಕಾರಿ ಸಚಿವ ಅರೆಸ್ಟ್ – ಕಾರಿನಲ್ಲಿ ಭಾರೀ ಹೈಡ್ರಾಮಾ, ಆಸ್ಪತ್ರೆಗೆ ಶಿಫ್ಟ್

Public TV
1 Min Read
V Senthil Balaji

ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತಮಿಳುನಾಡು ವಿದ್ಯುತ್ ಮತ್ತು ಅಬಕಾರಿ ಸಚಿವ ವಿ.ಸೆಂಥಿಲ್ ಬಾಲಾಜಿ (V Senthil Balaji) ಅವರನ್ನ ಬಂಧಿಸಿದೆ. ಸೆಂಥಿಲ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ ನಂತರ ಬಂಧಿಸಲಾಗಿದೆ.

ಇಡಿ ಸಚಿವರನ್ನ ಬಂಧಿಸುತ್ತಿದ್ದಂತೆ ಎದೆನೋವು ಎಂದು ಹೇಳಿ ಕಾರಿನಲ್ಲಿ ಕಣ್ಣೀರಿಟ್ಟಿದ್ದಾರೆ. ಭಾರೀ ಹೈಡ್ರಾಮಾದ ಬಳಿಕ ಬುಧವಾರ ಮುಂಜಾನೆ ಅವರನ್ನ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ (Omandurar Government Hospital) ದಾಖಲಿಸಲಾಗಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಬಿಪರ್‌ಜಾಯ್‌ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು

Tamilnadu

ಭಾರೀ ಹೈಡ್ರಾಮ: ಡಿಎಂಕೆ ನಾಯಕನನ್ನ ಆಸ್ಪತ್ರೆಗೆ ಕರೆತರುತ್ತಿದ್ದಂತೆ ಆಸ್ಪತ್ರೆ ಹೊರಗೂ ಜಮಾಯಿಸಿದ್ದ ಬೆಂಬಲಿಗರು ಭಾರೀ ಹೈಡ್ರಾಮಾ ಮಾಡಿದ್ದಾರೆ. ಇಡಿ ಕ್ರಮ ವಿರೋಧಿಸಿ ಸೆಂಥಿಲ್ ಅವರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಕಾರಿನಲ್ಲಿ ಮಲಗಿದ್ದಾಗಲೇ ಎದೆಯನ್ನು ಹಿಡಿದುಕೊಂಡು ನೋವು ಅಂತಾ ಕಣ್ಣೀರಿಟ್ಟಿದ್ದಾರೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸದ್ಯ ಚೆನ್ನೈನ ಓಮಂದೂರರ್ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜಿಸಲಾಗಿದ್ದು, ಸೆಂಥಿಲ್ ಬಾಲಾಜಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕೆ 7 ತುಂಡು – ಮೃತದೇಹ ಚರಂಡಿಯಲ್ಲಿ ಪತ್ತೆ

Share This Article