ಚೆನ್ನೈ: ಸ್ವಾತಂತ್ರ್ಯೋತ್ಸವದಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಧ್ವಜಾರೋಹಣ ಮಾಡಲು ಹಾಗೂ ಧ್ವಜಕ್ಕೆ ನಮಿಸಲು ನಿರಾಕರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ತಮಿಳ್ ಸೆಲ್ವಿ ಈ ವರ್ಷ ನಿವೃತ್ತಿ ಹೊಂದಲಿದ್ದು, ಅವರಿಗೆ ಅಭಿನಂದಿಸುವ ಸಲುವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜೊತೆಗೆ ಧ್ವಜಾರೋಹಣವನ್ನು ನೆರವೇರಿಸಲು ಅವರಿಗೆ ತಿಳಿಸಲಾಗಿತ್ತು. ಆದರೆ ಮುಖ್ಯಶಿಕ್ಷಕಿ ತಮಿಳ್ ಸೆಲ್ವಿ ಅವರು, ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಾಯಕ ಮುಖ್ಯ ಶಿಕ್ಷಕಿಯೇ ಧ್ವಜಾರೋಹಣ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಈ ಬಗ್ಗೆ ಮುಖ್ಯ ಶಿಕ್ಷಕಿ ಮಾತನಾಡಿದ್ದು, ತಾವು ಯಾಕೋಬಾ ಕ್ರಿಶ್ಚಿಯನ್ ಆಗಿದ್ದಕ್ಕೆ ಧ್ವಜಾರೋಹಣ ಮಾಡಲಾಗುವುದಿಲ್ಲ. ಅಷ್ಟೇ ಅಲ್ಲದೇ ತಾನು ಧ್ವಜಕ್ಕೆ ಯಾವುದೇ ಅಗೌರವವನ್ನು ತೋರುತ್ತಿಲ್ಲ. ಆದರೆ ನಾನು ದೇವರಿಗೆ ಮಾತ್ರ ನಮಸ್ಕರಿಸುತ್ತೇನೆ. ಬೇರೆ ಯಾರಿಗೂ ನಮಸ್ಕರಿಸುವುದಿಲ್ಲ. ಆದ್ದರಿಂದ ನಾವು ಧ್ವಜಾರೋಹಣ ಮಾಡಲು ಸಹಾಯಕ ಶಿಕ್ಷಕರ ಸಹಾಯ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನರನ್ನು ದಾರಿ ತಪ್ಪಿಸಬೇಡಿ: ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ಕಿಡಿ
Advertisement
Advertisement
ಘಟನೆಗೆ ಸಂಬಂಧಿಸಿ ಧರ್ಮಪುರಿಯ ಮುಖ್ಯ ಶಿಕ್ಷಣಾಧಿಕಾರಿಗಳಿಗೆ ಸ್ಥಳೀಯರು ದೂರನ್ನು ನೀಡಿದ್ದಾರೆ. ದೂರಿನನ್ವಯ ಈ ಹಿಂದಿನ ಸ್ವಾತಂತ್ರ್ಯೋತ್ಸವದಲ್ಲಿಯೂ ಮುಖ್ಯ ಶಿಕ್ಷಕಿಯು ರಜೆಯನ್ನು ತೆಗೆದುಕೊಂಡಿದ್ದರು. ತಮಿಳ್ ಸೆಲ್ವಿ ಅವರು ಸರ್ಕಾರಿ ಸಂಸ್ಥೆಯಲ್ಲಿ ಒಂದು ಧರ್ಮದ ಬಗ್ಗೆ ಒಲವು ಪ್ರದರ್ಶಿಸಿದ್ದಾರೆ ಜೊತೆಗೆ ಆಚರಣೆಗೆ ತಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಫಿಫಾ ಜೊತೆ 2 ಬಾರಿ ಸಭೆ ಮಾಡಲಾಗಿದೆ: ಸುಪ್ರೀಂಗೆ ಕೇಂದ್ರ